ಬೀದಿ ವ್ಯಾಪಾರಿಗಳ ಬಗ್ಗೆ ನಿವೇನಂದುಕೊಂಡಿದ್ದೀರಿ..! ಅವರೆಷ್ಟು ಒಳ್ಳೆಯವರು ಗೊತ್ತಾ..!
ನವಲಗುಂದ: ಬೀದಿ ವ್ಯಾಪಾರಿಗಳು ಅಂದ್ರೇ ಅನೇಕರು ಮೂಗು ಮುರಿಯುವುದೇ ಹೆಚ್ಚು. ಆದರೆ, ಬೀದಿ ವ್ಯಾಪಾರಿಗಳು ಎಷ್ಟೊಂದು ಮಾನವೀಯತೆ ಹೊಂದಿರುತ್ತಾರೆ ಎಂಬುದಕ್ಕೆ ಈ ಮಾಹಿತಿಯನ್ನ ನೋಡಿ ನಿಮಗೆ ತಿಳಿಯುತ್ತದೆ.
ಕೊರೋನಾ ಹೆಚ್ಚಿರುವ ಹಿನ್ನೆಲೆಯಲ್ಲಿ ಸ್ವತಃ ಬೀದಿ ವ್ಯಾಪಾರಿಗಳೇ ಉಚಿತವಾಗಿ ಮಾಸ್ಕಗಳನ್ನ ಕೊಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪತಹಶೀಲ್ದಾರ ಎಂ.ಸಿ.ಅಮವಾಸೆ ಭಾಗವಹಿಸಿ, ಕೊರೋನ ವೈರಸ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವ ಮೂಲಕ ತಮ್ಮ ಆರೋಗ್ಯ ತಾವೇ ಕಾಪಾಡಿಕೊಳ್ಳುಬೇಕೆಂದು ಹೇಳಿದರು.
ಕೊರೋನ ವೈರಸ್ ಬಗ್ಗೆ ಯಾರು ಕೂಡಾ ತಾತ್ಸಾರ ಮಾಡದೆ ಆಗಾಗ ಸೋಪ್ ಹಚ್ಚಿಕೊಂಡು ಕೈ ತೊಳೆದುಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲರಿಗೂ ಮನವಿ ಮಾಡಿಕೊಂಡರು.
ಬೀದಿ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಿಯಾಜಅಹ್ಮದ ನಾಶಿಪುಡಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ಅದನ್ನು ಜೋಪಾನ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಚಂದ್ರಶೇಖರ ಮಠಪತಿ, ಪಿ.ಎಸ್.ಐ ಜಯಪಾಲ್ ಪಾಟೀಲ್, ಮುಖ್ಯಾಧಿಕಾರಿ ಎನ್. ಎಚ್ ಖುದಾನವರ್, ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥ ಸಂಘದ ಸದಸ್ಯರು ಉಪಸ್ಥಿತರಿದ್ದರು. ಮಾಬುಸಾಬ ಯರಗುಪ್ಪಿ ನಿರೂಪಣೆ ಮಾಡಿದರು.