ನವಲಗುಂದ: ನೋಡಲ್ ಅಧಿಕಾರಿ ಸಕ್ರೆಪ್ಪನ ಸಾವಿಗೆ ಕಾರಣವಾಯಿತಾ “ವಿಸಿ ಮೀಟಿಂಗ್”…!?

ನವಲಗುಂದ: ತಾಲ್ಲೂಕು ಪಂಚಾಯತ ಕಚೇರಿಯ ಸ್ಟೋರ್ ರೂಮ್‌ನಲ್ಲಿ ನೇಣಿಗೆ ಕೊರಳೊಡ್ಡಿರುವ ನೌಕರನ ಆತ್ಮಹತ್ಯೆಯ ಹಿಂದೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳು ತನಿಖೆ ಮಾಡಿಸುವ ಅವಶ್ಯಕತೆ ಇದೆ ಎಂದು ಹಲವರು ಹೇಳುತ್ತಿದ್ದಾರೆ.
ಗೃಹಮಂಡಳಿಯ ನೋಡಲ್ ಅಧಿಕಾರಿಯಾಗಿದ್ದ ಸಕ್ರೆಪ್ಪ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಕಟ್ಟಡದಲ್ಲಿ ನೇಣಿಗೆ ಶರಣಾಗುವ ಮುನ್ನ ಸಾಕಷ್ಟು ಮಾನಸಿಕವಾಗಿ ಘಾಸಿಗೊಂಡಿದ್ದನೆಂದು ಹೇಳಲಾಗಿದೆ.
ನವಲಗುಂದ ಹಾಗೂ ಅಣ್ಣಿಗೇರಿಯ ಪ್ರಗತಿಯ ಬಗ್ಗೆ ಧಾರವಾಡ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯವರು ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಎರಡು ತಾಪಂ ಇಓಗಳಿಂದ ಮಾಹಿತಿ ಕೇಳಿದಾಗ ‘ಇಓ’ಗಳಿಬ್ಬರು ನೋಡಲ್ ಅಧಿಕಾರಿಯನ್ನ ‘ವಿಸಿ’ಯಲ್ಲೇ ತರಾಟೆಗೆ ತೆಗೆದುಕೊಂಡಿದ್ದೆ ಆತ ಆತ್ಮಹತ್ಯೆಗೆ ಶರಣಾಗಲು ಕಾರಣ ಎಂದು ಹೇಳಲಾಗುತ್ತಿದೆ.
ಸಕ್ರೆಪ್ಪ ಮದ್ಯ ವ್ಯಸನಿಯಾಗಿದ್ದರೂ ಅತಿರೇಕವಾಗಿ ಸೇವನೆ ಮಾಡುತ್ತಿರಲಿಲ್ಲ ಎನ್ನಲಾಗಿದ್ದು, ಈ ಸಾವಿಗೆ ನಿಖರವಾದ ತನಿಖೆಯನ್ನ ಸಂಬಂಧಿಸಿದ ಅಧಿಕಾರಿಗಳು ಮಾಡಬೇಕಿದೆ.