ನವಲಗುಂದ ಗುತ್ತಿಗೆದಾರರ ಪ್ರತಿಭಟನೆ ಧಾರವಾಡದಲ್ಲಿ… “ಲ್ಯಾಂಡ್ ಆರ್ಮಿ ಎಂಬ ಮಹಾನ್ ಕಂತ್ರಾಟ್ಗಾರ್”…!!!
ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದ ಗುತ್ತಿಗೆದಾರರು ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ತಮಗೆ ಆಗುತ್ತಿರುವ ಅನ್ಯಾಯವನ್ನ ತೀವ್ರವಾಗಿ ಖಂಡಿಸಿದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಗುತ್ತಿಗೆ ಕೆಲಸಗಳನ್ನ ಉದ್ದೇಶಪೂರ್ವಕವಾಗಿ ಲ್ಯಾಂಡ್ ಆರ್ಮಿಗೆ ನೀಡಲಾಗುತ್ತಿದೆ. ಎರಡೂವರೆ ವರ್ಷದಿಂದ ಸಂಕಷ್ಟ ಅನುಭವಿಸಲಾಗುತ್ತಿದೆ ಎಂದು ಹೋರಾಟಕ್ಕೀಳಿದ ಪ್ರತಿಭಟನಾಕಾರರ ಜೊತೆ ಕೆಲ ಕ್ಷಣ ಪೊಲೀಸರ ಜೊತೆಗೆ ವಾಗ್ವಾದ ನಡೆಯಿತು.
ಮೃತ್ಯುಂಜಯ ದಿಂಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆಯಲ್ಲಿ, ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನ ಲ್ಯಾಂಡ್ ಆರ್ಮಿಗೆ ನೀಡಲಾಗುತ್ತಿದೆ. ತುಂಡು ಗುತ್ತಿಗೆ ನೀಡುವುದನ್ನ ನಿಲ್ಲಿಸಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
