ನವಲಗುಂದ: ಖಾಸಗಿ ಆಯುಷ್ ವೈದ್ಯರ ಪ್ರತಿಭಟನೆ
ನವಲಗುಂದ: ರಾಜ್ಯದ ಗುತ್ತಿಗೆ ಆಯುಷ್ ವೈದ್ಯರ ವೇತನ ತಾರತಮ್ಯ ಹಾಗೂ ಖಾಸಗಿ ವೈದ್ಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎಎಫ್‌ಐನ ನವಲಗುಂದ ತಾಲೂಕು ಅಧ್ಯಕ್ಷ ಡಾ.ವಿ.ಎಸ್.ಮುಳ್ಳೂರು ಸರಕಾರಕ್ಕೆ ಒತ್ತಾಯಿಸಿದರು.
ಸಾಮಾಜಿಕವಾಗಿ ಆಯುಷ್ ವೈದ್ಯರ ಬೇಡಿಕೆಯನ್ನ ಈಡೇರಿಸಬೇಕು. ಅಲೋಪತಿ ಗುತ್ತಿಗೆ ವೈದ್ಯರಿಗೆ ಯಾವ ಆಧಾರದ ಮೇಲೆ ವೇತನ ಹೆಚ್ಚಿಸಲಾಗಿದೇಯೋ ಅದೇ ಥರನಾಗಿ ಆಯುಷ್ ವೈದ್ಯರಿಗೂ ನಿಗದಿ ಮಾಡುವಂತೆ ಕೋರಿದರು.
ನವಲಗುಂದ ತಹಶೀಲ್ದಾರ ಮೂಲಕವನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಪತ್ರ ಮನವಿ ಪತ್ರವನ್ನ ನೀಡಿದರು.
ಡಾ.ಎಂ.ಕೆ.ಹಿರೇಮಠ, ಬಿ.ಆರ್.ಮಕಳಿ, ವಿ.ಎಸ್.ಕಮ್ಮಾರ ಉಪಸ್ಥಿತರಿದ್ದರು.