ನವಲಗುಂದ ಪೊಲೀಸ್ ಠಾಣೆಗೆ “ಸ್ಟೀಮರ್” ವಿತರಣೆ…!

ನವಲಗುಂದ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಮಯಾ ಫೌಂಡೇಶನ್ ವತಿಯಿಂದ ಪೊಲೀಸ್ ಠಾಣೆಗೆ ಸ್ಟೀಮರ್ ಗಳನ್ನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರ ಮೂಲಕ, ಸ್ಟೀಮರಗಳನ್ನ ಪೊಲೀಸ್ ಠಾಣೆಗೆ ವಿತರಣೆ ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಶಾಸಕರು, ಪೊಲೀಸರು ತಮ್ಮ ಜೀವನದ ಹಂಗು ತೊರೆದು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಂದರು.
ಪೊಲೀಸ್ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ, ಪಿಎಸ್ಐ ಜಯಪಾಲ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ, ಐ.ಡಿ. ಪ್ರಭು, ಪುರಸಭೆ ಅಧ್ಯಕ್ಷ ಮಂಜು ಜಾಧವ, ಪುರಸಭೆ ಸದಸ್ಯ ಮಹಾಂತೇಶ ಕಲಾಲ, ನಿರಾಮಯ ಫೌಂಡೇಶನ್ ಸಂಚಾಲಕರಾದ ಪವನ್ ಪಾಟೀಲ, ಶಶಿ ತೆಂಗಿನಕಾಯಿ, ಆನಂದ್ ಜಕ್ಕಣ್ಣಗೌಡ್ರು, ಗಿರಿಧರ್ ಹಿರೇಮಠ, ಗುರು ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನ ಬಿಜೆಪಿಯ ಯುವ ಮೋರ್ಚಾ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ್ ಸಂಗನಗೌಡ್ರ ನಡೆಸಿಕೊಟ್ಟರು.