ನವಲಗುಂದ ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು…

ನವಲಗುಂದ: ಪಟ್ಟಣದಲ್ಲಿ ಯಾರೂ ಊಹಿಸದಷ್ಟು ಪೊಲೀಸರು ಬಂದೋಬಸ್ತ್‌ಗಾಗಿ ಬಂದಿದ್ದು, ಸಾರ್ವಜನಿಕರು ಅಚ್ಚರಿಗೊಂಡಿದ್ದಾರೆ.
ಬಂದೋಬಸ್ತ್ ವೀಡಿಯೋ…
ಪಟ್ಟಣದ ಲಿಂಗರಾಜ ವೃತ್ತದ ಬಳಿ ಜಿಲ್ಲೆಯ ವಿವಿಧ ಭಾಗದಿಂದ ಪೊಲೀಸ್ ಇನ್ಸಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹೆಚ್ಚು ಸೇರಿದ್ದನ್ನ ನೋಡಿ, ಪರವೂರಿಗೆ ಹೋಗುತ್ತಿರುವ ಪ್ರಯಾಣಿಕರು ಕೂಡಾ ‘ಏನಾಗಿದೆ’ ಎಂದು ಕಣ್ಣರಳಿಸಿ ನೋಡುತ್ತಿದ್ದಾರೆ.
ರೈತ ಹುತಾತ್ಮ ದಿನವನ್ನ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಪ್ರಮಾಣದಲ್ಲಿ ಇಷ್ಟೊಂದು ಬಂದೋಬಸ್ತ್ ಮಾಡಿದ್ದನ್ನ ಸ್ಥಳೀಯರು ನೋಡಿರಲಿಲ್ಲ.