ನವಲಗುಂದದ ನವೀನ್ ಪಾರ್ಕ್ ಹೆಸರು ಕೆಡಿಸಲು “ಕೈಲಾಗದವರ” ಪ್ರಯತ್ನ…
1 min readನವಲಗುಂದ: ತನ್ನ ಬಳಿ ಕೆಲಸ ಮಾಡುತ್ತಿದ್ದವನನ್ನ ತಿದ್ದಿ ತೀಡಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿದ ಹೊಟೇಲ್ ನಡೆಸುತ್ತಿರುವವರ ಹೆಸರು ಕೆಡಿಸಲು ಕೆಲವು ಕೆಲಸಕ್ಕೆ ಬಾರದವುಗಳು ಸಂಬಂಧವೇ ಇಲ್ಲದ ಪೋಟೋವೊಂದನ್ನ ಹರಿಬಿಟ್ಟು ‘ಚಿಲ್ರೆತನ’ ತೋರಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ನವೀನ ಪಾರ್ಕ್ ನ ಹೊಟೇಲ್ ನ್ನ ಬಾಡಿಗೆ ನಡೆಸುತ್ತಿರುವ ವಿಕ್ರಂ ಎನ್ನುವವರು, ತಮ್ಮ ಸಿಬ್ಬಂದಿ ಕುಡಿದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆತನಿಗೆ ಬುದ್ದಿ ಕಲಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆತನ ತಪಾಸಣೆ ಮಾಡಿಸುವ ರೀತಿಯಲ್ಲಿ ನಡೆದುಕೊಂಡು ಮರಳಿ ಬಂದಿದ್ದಾರೆ.
ಸೋಜಿಗವೆಂದರೇ, ಇದೇ ಸಮಯದಲ್ಲಿ ಬೇರೆ ಪ್ರಕರಣವೊಂದರಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯ ಪೋಟೋ ಮತ್ತು ವೀಡಿಯೋ ವೈರಲ್ ಮಾಡಿ, ಇದಕ್ಕೂ ನವೀನ್ ಪಾರ್ಕ್ ಬಾಡಿಗೆದಾರನಿಗೂ ಸಂಬಂಧವಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ.
ಸರಿಯಾದ ಮಾಹಿತಿಯನ್ನ ಜನರಿಗೆ ತಿಳಿಸಿ, ಜನಪರವಾಗಿರಬೇಕು ಎಂಬ ಪರಿಜ್ಞಾನವಿಲ್ಲದವರೇ ಇಂತಹ ಕೃತ್ಯಕ್ಕೆ ಮುಂದಾಗಿರುವುದು ಅಸಹ್ಯದ ಪರಮಾವಧಿಯಾಗಿದೆ.