ಗಂಡ ಸತ್ತ ನಂತರ ಮತ್ತೊಂದು ಮದುವೆಯಾದ ತಂಗಿ: ಸಹಿಸದೇ ಕೊಲೆ ಮಾಡಿದ ಸಹೋದರ…

ನವಲಗುಂದ: ತನ್ನ ಗಂಡನ ಸಾವಿನಿಂದ ಬೇಸತ್ತು ತವರು ಮನೆಗೆ ಬಂದ ಮಹಿಳೆಯೊಬ್ಬಳು, ಕೆಲವೇ ದಿನಗಳಲ್ಲಿ ಸಹೋದರನಿಗೆ ಬೇಡವಾಗಿದ್ದರೂ ಮದುವೆಯಾಗಿದ್ದೆ ಕೊಲೆಗೆ ಕಾರಣವೆಂದು ಗೊತ್ತಾಗಿದೆ.

ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಮದುವೆ ಮಾಡಿಕೊಂಡು ಹೋಗಿದ್ದ ಶಶಿಕಲಾ, ತನ್ನ ಗಂಡನ ಸಾವಿನ ನಂತರ ನವಲಗುಂದಕ್ಕೆ ಮರಳಿದ್ದಳು. ಈಗ ಕೆಲ ದಿನಗಳ ಹಿಂದಷ್ಟೇ, ತನ್ನಣ್ಣನಿಗೆ ಇಷ್ಟವಿಲ್ಲದವನೊಂದಿಗೆ ಮತ್ತೆ ಹಸೆಮಣೆ ಏರಿದ್ದಳು.
ತಂಗಿಯ ಈ ತೀರ್ಮಾನದಿಂದ ಖುದ್ದು ಹೋಗಿದ್ದ ಶಶಿಕಲಾಳ ಸಹೋದರ ಮಹಾಂತೇಶ ಶರಣಪ್ಪನವರ, ಇಂದು ಆಕೆಯ ಗಂಡನ ಮನೆಗೆ ಹೋಗಿ, ಖಾರದ ಪುಡಿ ಎರಚಿ ಕೊಲೆ ಮಾಡಿದ್ದಾನೆ.
ತನ್ನ ಸಹೋದರಿಯ ಉಸಿರು ನಿಂತಿದೆ ಎಂದು ಗೊತ್ತಾದ ಮೇಲೆನೇ ನೇರವಾಗಿ ಠಾಣೆಗೆ ಹೋಗಿ ಶರಣಾಗಿದ್ದಾನೆಂದು ಗೊತ್ತಾಗಿದೆ. ಘಟನೆಯ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.