ನವಲಗುಂದ: ಪತ್ನಿಯನ್ನ ಕೊಚ್ಚಿ ಕೊಂದ “ಪರಮಪಾಪಿ” ಪತಿ… ತಲ್ಲಣಗೊಂಡ ಗ್ರಾಮ…

ಹುಬ್ಬಳ್ಳಿ: ಪತ್ನಿಯ ಶೀಲ ಶಂಕಿಸಿ ಬರ್ಭರವಾಗಿ ಕೊಲೆಗೈದಿರುವ ಘಟನೆ ಧಾರವಾಡದ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.
ಕೊಲೆಯಾದ ದುರ್ದೈವಿಯನ್ನು ಮಲ್ಲವ್ವ ಶಿವಪ್ಪ ಬಳ್ಳೂರ (38) ಎಂದು ಗುರುತಿಸಲಾಗಿದೆ. ಶಿವಪ್ಪ ಹಾಗೂ ಮಲ್ಲವ್ವಳ ಮದುವೆಯಾಗಿ 15ವರ್ಷ ಕಳೆದಿವೆ. ಆಗಾಗ್ಗೆ ಗಂಡ ಹೆಂಡತಿಯ ನಡುವೆ ಜಗಳ ಸಂಭವಿಸುತ್ತಿದ್ದವು ಎನ್ನಲಾಗಿದೆ. ಆದರೆ, ನಿನ್ನೆ ರಾತ್ರಿ ಶಿವಪ್ಪ ಮನೆಗೆ ಬಂದು ಹೆಂಡತಿಯೊಂದಿಗೆ ಪತ್ನಿಯ ಶೀಲ ಶಂಕಿಸಿ ಕಾಲ್ಕೆರೆದು ಜಗಳಕ್ಕೆ ನಿಂತಿದ್ದಾನೆ.
ವೀಡಿಯೋ…
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮಲ್ಲವ್ವಳನ್ನು ಅಲ್ಲಿಯೆ ಇದ್ದ ಕೊಡಲಿಯಿಂದ ಮನಸ್ಸೋ ಇಚ್ಛೆ ಕೊಚ್ಚಿದ್ದಾನೆ. ಇದರಿಂದ ಮಗುಚಿ ಬಿದ್ದ ಮಲ್ಲವ್ವ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ಘಟನೆಯಿಂದ ಗ್ರಾಮದ ಮಹಿಳೆಯರು ಕೊಲೆಗೆಡುಕನ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಶಿವಪ್ಪ ಬಳ್ಳೂರನನ್ನು ಬಂದಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು. ತನಿಖೆ ಕೈಗೊಂಡಿದ್ದಾರೆ.