ನವಲಗುಂದ ಕ್ಷೇತ್ರಕ್ಕೆ ಮತ್ತಷ್ಟು ಆಕ್ಸಿಜನ್ ಕಾನ್ಸಂಟ್ರೇಟರ್, ಕೋವಿಡ್ ಕಿಟ್, ಪೋಸ್ಟ್ ಕೋವಿಡ್ ಮೆಡಿಶಿನ್…!

ಹುಬ್ಬಳ್ಳಿ: ನವಲಗುಂದ ಕ್ಷೇತ್ರದ ಶಾಸಕರ ಮೇಲಿನ ಅಭಿಮಾನಕ್ಕಾಗಿ ಐಪಿಎಸ್ ವಿ.ಸಿ.ಸಜ್ಜನರ ಹಾಗೂ ನವೀನ ಪಾರ್ಕ್ ನಿವಾಸಿಗಳ ಸಂಘದ ವತಿಯಿಂದ ಆಮ್ಲಜನಕ ಸಾಂದ್ರಕ ಹಾಗೂ ಕೊರೋನಾ ಕಿಟ್ ಗಳನ್ನ, ನವಲಗುಂದ ಕ್ಷೇತ್ರದ ಜನರ ಉಪಯೋಗಕ್ಕಾಗಿ ನವಲಗುಂದ ತಹಶೀಲ್ದಾರ ನವೀನ್ ಹುಲ್ಲೂರ ಅವರಿಗೆ ಹಸ್ತಾಂತರ ಮಾಡಿದರು.
ಈ ಸಮಯದಲ್ಲಿ ಮಾತನಾಡಿದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು, ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ ಅವರ ಕಾಳಜಿಯನ್ನ ಸ್ಮರಿಸಿದ್ದಲ್ಲದೇ, ಅವರ ಕುಟುಂಬದವರಿಗೆ ಧನ್ಯವಾದ ತಿಳಿಸಿದರು. ಇದೇ ಸಮಯದಲ್ಲಿ ನವೀನ ಪಾರ್ಕ್ ನಿವಾಸಿಗಳ ಸಂಘದ ಪದಾಧಿಕಾರಿಗಳಿಗೂ, ಜನಪರ ಕಾಳಜಿ ಹೊಂದಿದ್ದಕ್ಕೆ ಧನ್ಯವಾದ ತಿಳಿಸಿದರು.
ವೀಡಿಯೋ ಇಲ್ಲಿದೆ..
ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ ಅವರ ಸಹೋದರ ಡಾ.ಎಂ.ಸಿ.ಸಜ್ಜನರ ಅವರು, ಆಕ್ಸಿಜನ್ ಕಾನ್ಸಂಟ್ರೇಟರ್, 600 ಕೋವಿಡ್ ಕಿಟ್ ಮತ್ತು 500 ಪೋಸ್ಟ್ ಕೋವಿಡ್ ಮೆಡಿಶಿನ್ ಗಳನ್ನ ಹಸ್ತಾಂತರ ಮಾಡಿದರು. ನವೀನ ಪಾರ್ಕ್ ನಿವಾಸಿಗಳ ಸಂಘವೂ ಎರಡು ಆಮ್ಲಜನಕ ಸಾಂದ್ರಕಗಳನ್ನ ನೀಡಿದರು.