ನವಲಗುಂದ ಕ್ಷೇತ್ರದಲ್ಲಿ ಶಿಕ್ಷಣದ ಹೊಳೆ: ಶಾಸಕ ಶಂಕರ ಪಾಟೀಲಮುನೇನಕೊಪ್ಪ ಘೋಷಣೆ
ನವಲಗುಂದ: ಶಿಕ್ಷಣ ಕ್ಷೇತ್ರದಲ್ಲಿ ಹೊಸತನ ಮೂಡಿಸಬೇಕು. ಸರಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕೆಂಬ ಸದುದ್ದೇಶ ಹೊಂದಿರುವ ಶಾಸಕ ಹಾಗೂ ಮೂಲಭೂತ ಸೌಕರ್ಯ ನಿಗಮದ ಶಂಕರ ಪಾಟೀಲಮುನೇನಕೊಪ್ಪ, ಕ್ಷೇತ್ರದಲ್ಲಿ 199 ಶಾಲಾ ಕೊಠಡಿಗಳ ನಿರ್ಮಾಣ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ಕೊಡಲು ನಿರ್ಧರಿಸಿದ್ದಾರೆ.
ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಮಾಡೆಲ್ ಹೈಸ್ಕೂಲನಲ್ಲಿ ನಡೆದಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನರ ಜನ್ಮದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮುನೇನಕೊಪ್ಪ ಮಾತನಾಡುತ್ತಿದ್ದರು.
ಸರಕಾರಿ ಶಾಲೆಗಳ ಕಟ್ಟಡವನ್ನ ಹೊಸದಾಗಿಯೇ ನಿರ್ಮಿಸುವ ಮಹತ್ವದ ಕಾರ್ಯಕ್ಕೆ ಸಧ್ಯದಲ್ಲೇ ಚಾಲನೆ ದೊರಕಲಿದೆ. ಯಾವೊಬ್ಬ ಮಗು ಶಿಕ್ಷಣದಿಂದ ವಂಚಿತನಾಗಬಾರದು. ಅಷ್ಟೇ ಅಲ್ಲ, ಸರಕಾರಿ ಶಾಲೆಗಳ ಕಟ್ಟಡಗಳು ಮಾದರಿಯಾಗುವಂತೆ ಇರಬೇಕೆಂಬ ಉದ್ದೇಶ ಹೊಂದಿದ್ದೇನೆ. ಅದನ್ನ ಶಿಕ್ಷಕರ ದಿನಾಚರಣೆಯಂದೇ ಹೇಳುವುದು ಸೂಕ್ತವೆನಿಸಿತ್ತೆಂದರು.
ಅಣ್ಣಿಗೇರಿ ತಾಲೂಕಿನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಹಂತ ಹಂತವಾಗಿ ನವಲಗುಂದ ನಗರದಲ್ಲಿ ಕೂಡಾ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು.
ಇದೇ ಸಮಯದಲ್ಲಿ ಉತ್ತಮ ಶಿಕ್ಷಕ ಪುರಸ್ಕೃತರಿಗೆ ಸತ್ಕಾರ ಮಾಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.