ಸಚಿವರ ಸಹೋದರ “ಸಾವು-ಬದುಕಿನ” ನಡುವೆ ಹೋರಾಟದಲ್ಲಿರುವಾಗ- ಕ್ಷೇತ್ರದಲ್ಲಿ “ಕೋನರೆಡ್ಡಿ” ರಾಜಕೀಯ…
1 min readನವಲಗುಂದ: ಕ್ಷೇತ್ರದ ಶಾಸಕರೂ ರಾಜ್ಯದ ಸಚಿವರೂ ಆಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಹೋದರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವಾಗ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿರುವುದು ಕ್ಷೇತ್ರದ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವ ಶಂಕರ ಪಾಟೀಲರ ಸಹೋದರ ಡಾ.ಮಲ್ಲನಗೌಡ ಪಾಟೀಲರು, ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೀವ ಉಳಿಯುವುದೇ ಕಷ್ಟ ಎಂದು ವೈದ್ಯರು ಹೇಳಿದ್ದು, ಇಂತಹ ಸಮಯದಲ್ಲಿ ರಾಜಕೀಯ ಮಾಡಲು ಕೋನರೆಡ್ಡಿ ಮುಂದಾಗಿರುವುದು, ಅವರ ಹಪಾಹಪಿಯನ್ನ ತೋರಿಸುತ್ತಿದೆ ಎಂದು ಹಲವರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಕೋನರೆಡ್ಡಿಯವರ ಸಹೋದರ ಆಕಸ್ಮಿಕವಾಗಿ ಸಾವಿಗೀಡಾದ ಸಮಯದಲ್ಲಿ ಮೊದಲು ಹೋಗಿ ನಿಂತಿದ್ದು ಇದೇ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಎಂಬುದನ್ನ ಕೋನರೆಡ್ಡಿಯವರು ಮರೆತಿದ್ದಾರೆ ಎಂದು ಜನತೆ ಬೇಸರಿಸಿದ್ದಾರೆ.
ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ಸಮಸ್ಯೆಗಳನ್ನು ಬಗೆಹರಿಸಲು ಇಂತಹ ಸ್ಥಿತಿಯಲ್ಲಿಯೂ ಕಂಕಣಬದ್ಧರಾಗಿರುವ ಸಚಿವರು ಮುಂದಾಗಿದ್ದು ಗೊತ್ತಿದ್ದರೂ ಕೂಡಾ, ರಾಜಕೀಯ ಮಾಡಲು ಮುಂದಾಗಿರುವುದು ಅಸಹ್ಯವೆಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ.
ಕಳೆದ ಹದಿನೈದು ದಿನಗಳಿಂದಲೂ ಸಚಿವರ ಸಹೋದರ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ, ನಿರಂತರವಾಗಿ ಕ್ಷೇತ್ರದಲ್ಲಿನ ತೊಂದರೆಯನ್ನ ನಿವಾರಿಸುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕುಟುಂಬದ ಮೂರು ಸದಸ್ಯರನ್ನ ಕಳೆದುಕೊಂಡು ನೋವಿನಲ್ಲಿದ್ದರೂ, ಎಲ್ಲವನ್ನೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಿಭಾಯಿಸುತ್ತಿದ್ದಾರೆ.
ಇಂತಹ ಸಂಕಷ್ಟ ಕಾಲದಲ್ಲಿ ಜನರ ಹೆಸರು ಹೇಳಿ, ರಾಜಕೀಯ ಮಾಡಲು ಮುಂದಾಗಿದ್ದು ಅವರತನವನ್ನ ಬಿಂಬಿಸುತ್ತಿದೆ. ಇಂತಹದನ್ನ ಅರಿತ ಬುದ್ಧಿವಂತ ವಿನೋದ ಅಸೂಟಿ ಕೂಡಾ, ರಸ್ತೆಗಿಳಿದಿರುವುದು ಅವರಲ್ಲಿನ “ಮಾನವೀಯತೆ” ಎಂತಹದ್ದು ಎಂದು ಬಿಂಬಿಸುವಂತಾಗಿದೆ.