“ಪರ್ಮಿಷನ್ ತೆಗೆದುಕೊಂಡಿಲ್ಲ” ಎಂದು ನವಲಗುಂದ ಅಂಜುಮನ್‌ದವರೇ ಹೇಳಿದ್ದಾರೆ: ದೂರುದಾರ ಸರಕಾರಿ ಅಧಿಕಾರಿ ಬಿಚ್ಚಿಟ್ಟ ಸತ್ಯ…

ಧಾರವಾಡ: ಪಾರಂಪರಿಕ ಗುಡ್ಡದ ಮಣ್ಣನ್ನ ತೆಗೆದುಕೊಂಡು ಈದ್ಗಾ ಪ್ರದೇಶವನ್ನ ಸಮತಟ್ಟ ಮಾಡಿಕೊಂಡ ಬಗ್ಗೆ ಸ್ಥಳ ಪರಿಶೀಲನೆಗೆ ಹೋದಾಗ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಿಗೆ ಪಡೆದಿಲ್ಲ ಎಂದು ಅಂಜುಮನ್ ಸಂಸ್ಥೆಯವರೇ ಹೇಳಿದ್ದಾರೆ ಎಂದು ಇಲಾಖೆಯ ಅಧಿಕಾರಿ ಮಹೇಶ ಗೌಡನಾಯ್ಕ ಹೇಳಿದ್ದಾರೆ.
ನವಲಗುಂದ ಪಟ್ಟಣದಲ್ಲಿನ ಅಜಾತ ನಾಗಲಿಂಗ ಗುಡ್ಡದ ಮಣ್ಣನ್ನ ಲೂಟಿ ಮಾಡುತ್ತಿರುವ ಬಗ್ಗೆ ಯಾರೂ ದೂರು ನೀಡದೇ ಇದ್ದರೂ ಸ್ವಯಂಕೃತ ಪ್ರಕರಣ ದಾಖಲು ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಬಗ್ಗೆ ಸ್ಪಷ್ಟವಾದ ಉತ್ತರ ನೀಡಿದೆ.
ವೀಡಿಯೋ ಇಲ್ಲಿದೆ ನೋಡಿ….
ಗುಡ್ಡದ ಮಣ್ಣನ್ನ ತೆಗೆದ ಬಗ್ಗೆ ಇಲ್ಲಿಯವರೆಗೆ ಯಾರೂ ದೂರನ್ನ ನೀಡಿಲ್ಲ. ಆದರೆ, ಬೇರೆಯವರ ಹೆಸರಿನ ಮೇಲೆ ಹಾಕಿ, ತಮ್ಮ ಬೇಳೆ ಬೇಯಿಸಿಕೊಳ್ಳು ನಿಂತಿರುವುದು ಎಲ್ಲರಿಗೂ ಅರ್ಥವಾಗುತ್ತಿದೆ. ಈಗ ಆರೋಪಿ ಆಗಿರುವ ಅಂಜುಮನ್ ಸಂಸ್ಥೆಯನ್ನ ಅಧಿಕಾರಿ ಮೊದಲೇ ಕೇಳಿದ್ದರು ಎಂಬ ಸತ್ಯ ಬಹಿರಂಗಗೊಂಡಿದೆ.