ನುಡಿದಂತೆ “ರಾಜೀನಾಮೆ” ನೀಡಿದ ನವಲಗುಂದ ಪುರಸಭೆ ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ….

ಧಾರವಾಡ: ಕಾಂಗ್ರೆಸ್ ಪಕ್ಷದ ಕಟ್ಟಾಳುವಿನಂತೆ ಪಕ್ಷದ ಮುಖಂಡರ ಮಾತಿನಂತೆ ನವಲಗುಂದ ಪುರಸಭೆಯ ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಪಕ್ಷದ ಶಿಸ್ತಿನ ಸಿಪಾಯಿಯಂತೆ ಕಾರ್ಯನಿರ್ವಹಿಸಿದ್ದ ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ, ಯಾವುದೇ ಒತ್ತಡಕ್ಕೂ ಮಣಿಯದಂತೆ ಜನಪರ ಕಾಳಜಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಅವರಿಂದು ಅದೇ ಮನಸ್ಥಿತಿಯಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ‘ತಾವು, ಅಧಿಕಾರಕ್ಕಂಟಿಕೊಂಡಿಲ್ಲ’ ಎಂದು ತೋರಿಸಿಕೊಟ್ಟರು.

ನವಲಗುಂದ ಪಟ್ಟಣದಲ್ಲಿ ತಮ್ಮದೇ ರೀತಿಯ ಛಾಪು ಮೂಡಿಸುವಲ್ಲಿ ಖೈರುನಬಿ ನಾಶಿಪುಡಿ ಯಶಸ್ವಿಯಾಗಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಜನಪರ ಕಾಳಜಿಯನ್ನ ಮುಂದುವರೆಸಿಕೊಂಡು ಹೋಗುವ ಮನೋಭಾವನೆ ಹೊಂದಿದ್ದಾರೆ.
ಇಷ್ಟು ದಿನದವರೆಗೆ ಈ ಅವಕಾಶ ಕಲ್ಪಿಸಿದ ಪ್ರಮುಖರಿಗೆ ಧನ್ಯವಾದ ತಿಳಿಸಿರುವ ಖೈರುನಬಿ ನಾಶಿಪುಡಿ ಅವರು, ತಮ್ಮ ವಾರ್ಡಿನ ಪ್ರತಿ ಮತದಾರರಿಗೂ ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.