ನಿರುದ್ಯೋಗಿಗಳಿಗೆ “ನವಲಗುಂದ”ದಲ್ಲಿ ಸುವರ್ಣ ಅವಕಾಶ ಒದಗಿಸಲು ಮುಂದಾದ “ಎಸ್.ಪಿ.ಫೌಂಡೇಷನ್…!!!

ನವಲಗುಂದ: ನಿರುದ್ಯೋಗ ಸಮಸ್ಯೆಯನ್ನ ಹೋಗಲಾಡಿಸುವ ಉದ್ದೇಶದಿಂದ ಎಸ್.ಪಿ.ಫೌಂಡೇಷನ್ ನವಲಗುಂದ ಪಟ್ಟಣದಲ್ಲಿ ಮುಂಬರುವ ಶನಿವಾರ (08.02.2025) ಉದ್ಯೋಗಮೇಳವನ್ನ ಹಮ್ಮಿಕೊಂಡಿದೆ.
ಈ ಬಗ್ಗೆ ನವಲಗುಂದದಲ್ಲಿ ಫೌಂಡೇಷನ್ ಪ್ರಮುಖರಾದ ಸದಾನಂದ ಗಾಳಪ್ಪನವರ, ಎಸ್.ಪಿ.ಫೌಂಡೇಷನ್ ಮೂಲಕ ನಿರುದ್ಯೋಗಿಗಳಿಗೆ ಸುಮಾರು 2500 ನೌಕರಿಗಳನ್ನ 50 ಕಂಪನಿಗಳ ಮೂಲಕ ಕೊಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಎಸ್.ಪಿ.ಫೌಂಡೇಷನ್ ನಡೆಸುತ್ತಿರುವ ಉದ್ಯೋಗ ಮೇಳವೂ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್‌ನಲ್ಲಿ ನಡೆಯಲಿದೆ. ವಿಕಲಚೇತನರಿಗೂ ಅವಕಾಶವಿದ್ದು, ಅವರು ಮೇಳದಲ್ಲಿ ಭಾಗವಹಿಸಬಹುದೆಂದು ಗಾಳಪ್ಪನವರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜಶೇಖರ ಕಂಪ್ಲಿ, ಶಿವಕುಮಾರ ಬಳಿಗಾರ, ಉದ್ಯೋಗ ವಿನಿಮಯ ಕೇಂದ್ರದ ರಾಜು ಪಾಟೀಲ, ರೋಹಿತ ಮತ್ತಿಹಳ್ಳಿ, ಪ್ರಭು ಬುಳಗಣ್ಣನವರ, ಫಕ್ಕೀರಪ್ಪ (ಮುತ್ತು) ಚಾಕಲಬ್ಬಿ, ಸುಭಾಸ ಕಿತ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.