ನವಲಗುಂದಲ್ಲಿ ಶಾಸಕ ಮುನೇನಕೊಪ್ಪ ಧ್ವಜಾರೋಹಣ: ರೈತರ ಜೀವನಕ್ಕಾಗಿ ಪಣ ತೊಡುವ ಭರವಸೆ
ನವಲಗುಂದ: ರೈತರು ದೇಶದ ಬೆನ್ನಲಬು ಎನ್ನುವುದನ್ನ ನಾನು ವಯಕ್ತಿಕವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ರೈತರೇ ದೇಶದ ಆಧಾರ ಸ್ತಂಭ. ನಾನೂ ಕೂಡ ರೈತ ಕುಟುಂಬದಿಂದ ಬಂದಿರುವುದೇ ಇದಕ್ಕೇಲ್ಲ ಕಾರಣ. ಈ ಸ್ವಾತಂತ್ರ್ಯೋತ್ಸವ ನಮ್ಮೇಲ್ಲರ ಭರವಸೆಯ ಸಾಕಾರಗೊಳಿಸಿದ ದಿನವೆಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ತಾಲೂಕು ಆಡಳಿತದಿಂದ 74ನೇ ಧ್ವಜಾರೋಹಣ ನೆರವೇರಿಸಿದ ಶಾಸಕರು, ಪ್ರತಿಯೊಬ್ಬರು ಕೂಡಿಕೊಂಡು ಹೋಗಬೇಕಾಗಿದೆ. ಎಲ್ಲರ ಅಭಿವೃದ್ಧಿಯನ್ನ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಕೊರೋನಾದಿಂದ ಆಗಿರುವ ಹಿನ್ನೆಡೆಯನ್ನ ಮೆಟ್ಟಿ ನಿಲ್ಲಬೇಕಾಗಿದೆ ಎಂದರು.
ತಹಶೀಲ್ದಾರ ನವೀನ ಹುಲ್ಲೂರ ಸೇರಿದಂತೆ ಅಧಿಕಾರಿ ವರ್ಗ ಉಪಸ್ಥಿತರಿದ್ದರು.