ನವಲಗುಂದಲ್ಲಿ ನರಗೋಗ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ..!
1 min read`ನವಲಗುಂದ: ಗುರುವಂದನಾ ಸ್ವಾಗತ ಸಮಿತಿ ಮಾಡೆಲ್ ಹೈಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ನರರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನ ನವಲಗುಂದ ಪಟ್ಟಣದ ದೇಸಾಯಿ ಪೇಟೆಯ ಉರ್ದು ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಪುರಸಭೆ ಸದಸ್ಯ ಅಪ್ಪಣ್ಣ ಹಳ್ಳದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಯನಗೌಡ ಪಾಟೀಲ, ಮಂಜುನಾಥ ಸುಬೇದಾರ, ನಾಗಪ್ಪ ಸಂಗಟಿ, ಖ್ಯಾತ ನರ ತಜ್ಞರು ವೈದ್ಯ ಡಾ.ವಿಜಯಮಹಾಂತೇಶ ಕೆ.ಪಿ ಆಗಮಿಸಿದ್ದರು.
ಪಟ್ಟಣದ ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜನೆ ಮಾಡಿದ್ದ ಶಿಬಿರಕ್ಕೆ ನೂರಾರು ಜನರು ಆಗಮಿಸಿ, ಪ್ರಯೋಜನ ಪಡೆದುಕೊಂಡರು. ನರರೋಗಗಳು ಬರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಡಾ.ವಿಜಯಮಹಾಂತೇಶ ಸುಬೇದಾರ ಸಮಗ್ರವಾಗಿ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಪ್ಪಣ್ಣ ಹಳ್ಳದ ಮಾತನಾಡಿ, ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಲು ಬಡವರಿಗೆ ಆಗುವುದಿಲ್ಲ. ಹೀಗಾಗಿ ಈ ಶಿಬಿರವನ್ನ ಆಯೋಜನೆ ಮಾಡಲಾಗಿದ್ದು, ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಗುರುವಂದನ ಸ್ವಾಗತ ಸಮಿತಿಯ ಮಾಡೆಲ್ ಹೈಸ್ಕೂಲಿನ ಸದಸ್ಯರು ಉಪಸ್ಥಿತರಿದ್ದರು.