ನವಲಗುಂದಲ್ಲಿ ಸಿದ್ಧರಾಮಯ್ಯ: ವಿನೋದ ಅಸೂಟಿ ಸಾಥ್
1 min readಧಾರವಾಡ: ಬಾಗಲಖೋಟೆ ಜಿಲ್ಲೆಯ ಬದಾಮಿಯಿಂದ ಧಾರವಾಡದ ಮಾಜಿ ಸಚಿವ ವಿನಯ ಕುಲಕರ್ಣಿಯವರ ಮನೆಗೆ ಬರುತ್ತಿದ್ದ ವೇಳೆಯಲ್ಲಿ ನವಲಗುಂದ ಪಟ್ಟಣದಲ್ಲಿಳಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರತಿಭಟನೆ ಮಾಡುತ್ತಿರುವ ಕೆಎಸ್ಸಾರ್ಟಿಸಿ ನೌಕರರೊಂದಿಗೆ ಮಾತನಾಡಿದ್ರು.
ಸರಕಾರಿ ನೌಕರರೆಂದು ತಮ್ಮನ್ನ ಪರಿಗಣಿಸುವಂತೆ ಒತ್ತಾಯಿಸಿ ನವಲಗುಂದ ಬಸ್ ನಿಲ್ದಾಣದ ಮುಂದೆ ಹೋರಾಟ ಮಾಡುತ್ತಿರುವ ನೌಕರರ ಜೊತೆ ಮಾತನಾಡಿದ ಮಾಜಿ ಸಿಎಂ, ರಾಜ್ಯ ಸರಕಾರದ ಗಮನಕ್ಕೆ ಈಗಾಗಲೇ ನಿಮ್ಮ ಬೇಡಿಕೆಯನ್ನ ಮನವರಿಕೆ ಮಾಡುವ ಪ್ರಯತ್ನವನ್ನ ಮಾಡಿದ್ದೇವೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದರು.
ನೌಕರರು ತಮ್ಮ ಅಳಲನ್ನ ಹೇಳಿಕೊಂಡರು. ಸರಕಾರದಲ್ಲೇ ಬೇರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೂ ತಮಗೂ ಏನೇನು ವ್ಯತ್ಯಾಸವಿದೆ ಎನ್ನುವುದನ್ನ ಮಾಜಿ ಸಿಎಂ ಸಿದ್ಧರಾಮಯ್ಯನವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನ ಮಾಡಿದ್ರು.
ನವಲಗುಂದ ಕಾಂಗ್ರೆಸ್ ಮುಖಂಡ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ, ಸುಲೇಮಾನ ನಾಶಿಪುಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.