ಮಾಜಿ ಸೈನಿಕನಿಗೆ ಹಾಲಿ ಪೊಲೀಸನ ಕಿರುಕುಳ- ಬಾಡಿಗೆಗೆ ಮನೆ ಕೊಟ್ಟು ಮಾಲೀಕನ ಪರದಾಟ..

ಧಾರವಾಡ: ಇದೊಂದು ವಿಚಿತ್ರ ಪ್ರಕರಣ. ಇಲ್ಲಿ ದೇಶ ಸೇವೆ ಮಾಡಿ ಬಂದ ಸೈನಿಕನಿದ್ದು, ಇನ್ನೊಂದೆಡೆ ಸ್ಥಳೀಯವಾಗಿ ಜನರನ್ನ ಕಾಯುವ ಪೊಲೀಸ್ ಇದ್ದಾರೆ. ಆದರೆ, ಮಾಜಿ ಸೈನಿಕ ಗೋಳಿಡುವ ಸ್ಥಿತಿಗೆ ಬಂದಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಇದು ವಿಷಯ..
ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಮಾಜಿ ಸೈನಿಕರ ಕಾಲೋನಿಯಲ್ಲಿ ಗಿರಿಯಪ್ಪ ದೇವರೆಡ್ಡಿ ಎನ್ನೋರು ಮನೆಯನ್ನಕಟ್ಟಿಕೊಂಡು ಬಾಡಿಗೆಗಾಗಿ ಡಿಆರ್ ಪೇದೆ ಯಶವಂತ ಎಂಬ ಎನ್ನುವವರಿಗೆ ನೀಡಿದ್ದಾರೆ. ಹೆಂಡತಿ ಮಕ್ಕಳೊಂದಿಗೆ ಬಂದಿದ್ದ ಪೇದೆ ಯಶವಂತ, ಆಮೇಲೆ ಮನೆಗೆ ಬಾರದೇ ಹೋಗಿದ್ದರಿಂದ, ಪತ್ನಿಯೂ ಕೂಡಾ ಮನೆಯಿಂದ ಹೊರಟು ಹೋಗಿದ್ದಾರೆ.
ಸೋಜಿಗವೆಂದರೇ, ಕಳೆದ 8ತಿಂಗಳಿಂದ ಬಾಡಿಗೆಯನ್ನೂ ಕೊಡದೇ ಮನೆಯಲ್ಲಿರುವ ವಸ್ತುಗಳನ್ನ ತೆಗೆದುಕೊಂಡು ಹೋಗದೇ ಮಾಜಿ ಸೈನಿಕನಿಗೆ ತೊಂದರೆಯಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರನ್ನ ನೀಡಿದ್ದಾರೆ.
ಆದರೆ, ಇಲ್ಲಿಯವರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಯಾವುದೇ ಸಹಾಯವನ್ನ ಮಾಡಿಲ್ಲ. ಡಿಆರ್ ಪೇದೆ ಯಶವಂತ ಮಾತ್ರ, ಇವತ್ತ್ ಬರ್ತೇನಿ ಸರ್.. ನಾಳೀ ಬರ್ತೇನಿ ಸರ್.. ಎಂದು ದಿನಗಳನ್ನ ನೂಕುತ್ತಿದ್ದಾನೆ.
ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಅವರೇ, ದೇವರೆಡ್ಡಿ ಅವರು ದೇಶ ಸೇವೆ ಮಾಡಿ ಬಂದು ನೆಮ್ಮದಿಗಾಗಿ ಮನೆ ಕಟ್ಟಿಕೊಂಡು, ಬಾಡಿಗೆ ಬರುವುದರಲ್ಲಿ ಚೆನ್ನಾಗಿರಬೇಕೆಂದು ಬಯಸಿದ್ದರು. ಆದರೆ, ನಿಮ್ಮದೇ ಇಲಾಖೆಯ ಪೇದೆಯಿಂದ ತೊಂದರೆಯಾಗುತ್ತಿದೆ ಎಂದು ನಿಮ್ಮ ಗಮನಕ್ಕೂ ತಂದಿದ್ದಾರೆ. ನೀವೇ ಮುಂದೆ ನಿಂತು ಸರಿ ಮಾಡಿ, ಇಲ್ಲದಿದ್ದರೇ, ಮಾಜಿ ಸೈನಿಕನಿಗೆ ಪೊಲೀಸ್ ಇಲಾಖೆ ಗೌರವ ಕೊಡುವುದಿಲ್ಲ ಎಂಬುದು ಈ ಪ್ರಕರಣದಿಂದ ಜಗ್ಗಜ್ಜಾಹೀರಾಗುವುದು ಬೇಡವಲ್ಲವೇ..!