ಥ್ಯಾಂಕ್ಯೂ ಕೃಷ್ಣಕಾಂತ ಸರ್: ಡಿಆರ್ ಪೇದೆ ಬಾಡಿಗೆ ಮನೆ ಖಾಲಿ ಮಾಡಿದ್ದಾರೆ.. ಮಾಜಿ ಸೈನಿಕ ಫುಲ್ ಖುಷ್..
1 min readಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದ ಮಾಜಿ ಸೈನಿಕರ ಕಾಲೋನಿಯಲ್ಲಿ ಗಿರಿಯಪ್ಪ ದೇವರೆಡ್ಡಿ ಎನ್ನೋರು ಮನೆಯನ್ನಕಟ್ಟಿಕೊಂಡು ಬಾಡಿಗೆಗಾಗಿ ಡಿಆರ್ ಪೇದೆ ಯಶವಂತ ಎಂಬ ಎನ್ನುವವರಿಗೆ ನೀಡಿದ್ದರು. ಹೆಂಡತಿ ಮಕ್ಕಳೊಂದಿಗೆ ಬಂದಿದ್ದ ಪೇದೆ ಯಶವಂತ, ಆಮೇಲೆ ಮನೆಗೆ ಬಾರದೇ ಹೋಗಿದ್ದರಿಂದ, ಪತ್ನಿಯೂ ಕೂಡಾ ಮನೆಯಿಂದ ಹೊರಟು ಹೋಗಿದ್ದರಾದರೂ ಮನೆಯನ್ನ ಖಾಲಿ ಮಾಡದೇ, ಮಾಜಿ ಸೈನಿಕನಿಗೆ ತೊಂದರೆ ಕೊಡಲಾಗುತ್ತಿತ್ತು.
ಈ ವಿಷಯವನ್ನ ಕರ್ನಾಟಕವಾಯ್ಸ್.ಕಾಂ ಹೊರಗೆ ಹಾಕಿದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ನವಲಗುಂದ ವೃತ್ತ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರಿಗೆ ಆದೇಶ ನೀಡಿ, ಮನೆಯನ್ನ ಖಾಲಿ ಮಾಡಿಸುವಲ್ಲಿ ಸಹಕಾರ ನೀಡಿದ್ದಾರೆ.
ಕಳೆದು ಎರಡು ದಿನದ ಹಿಂದೆ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ನಲ್ಲಿ ಬಂದ ನಂತರ ಅವತ್ತೆ ಮಾಜಿ ಸೈನಿಕರಿಗೆ ಸಹಾಯ ಮಾಡಿ ಎಂದು ಹೇಳಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇಂದು ಮನೆಯನ್ನ ಖಾಲಿ ಮಾಡಿಸುವ ಮೂಲಕ ಮಾಜಿ ಸೈನಿಕನಿಗೆ ಸಾಕಷ್ಟು ಸಹಕಾರ ನೀಡಿದ್ದಾರೆ.
ಇಂದು ಮನೆಯನ್ನ ಖಾಲಿ ಮಾಡುವಾಗಲೂ ಪೇದೆ ಯಶವಂತ ಬಾರದೇ ಅವರ ತಂದೆ ಬಂದು ಎಲ್ಲ ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲ, ಬಾಡಿಗೆಯ ಹಣವನ್ನೂ ನೀಡಿದ್ದಾರೆಂದು ದೇವರೆಡ್ಡಿಯವರು ಹೇಳಿದ್ದಾರೆ.
ಅದೇನೇ ಇರಲಿ, ಪೊಲೀಸ್ ವರಿಷ್ಠಾಧಿಕಾರಿಯವರು ತಕ್ಷಣವೇ ಕ್ರಮ ತೆಗೆದುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಸಂಶೆಗೆ ಕಾರಣವಾಗಿದೆ.