ನವಲಗುಂದದಲ್ಲಿ “ಭರ್ಜರಿ ಬ್ಯಾಟಿಂಗ್” ಮಾಡಿದ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ….!!!

ನವಲಗುಂದ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರಿಂದ ಪಟ್ಟಣದಲ್ಲಿ ಆರಂಭಗೊಂಡ ನವಲಗುಂದ ಪ್ರೀಮಿಯರ್ ಲೀಗ್ ಸೀಸನ್-5ರ ಉದ್ಘಾಟನೆ ವೇಳೆಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಯುವಕರಲ್ಲಿ ಉತ್ಸಾಹ ಇಮ್ಮಡಿಸಿದರು.
ಯುವಕರ ಜೊತೆ ಸದಾಕಾಲ ಜೊತೆಗಿರುವ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರ ಬ್ಯಾಟಿಂಗ್ ನೋಡಿ ಯುವಕರು ಜಯಘೋಷ ಹಾಕಿದರು.
ವೀಡಿಯೋ ಇಲ್ಲಿದೆ ನೋಡಿ…
ರಾಷ್ಟ್ರದ ಹೃದಯ ಬಡಿತವಾದ ಕ್ರಿಕೆಟ್, ಪ್ರತಿಯೊಬ್ಬ ಭಾರತೀಯನ ರಕ್ತನಾಳಗಳಲ್ಲಿ ಹರಿಯುವ ಆಳವಾದ ಭಾವನೆಗಳೊಂದಿಗೆ ಅನುರಣಿಸುತ್ತದೆ. ಇದು ಉತ್ಸಾಹವನ್ನು ಬೆಳಗಿಸುವ, ಲಕ್ಷಾಂತರ ಜನರನ್ನು ಒಂದುಗೂಡಿಸುವ ಮತ್ತು ಸಮಯದ ಗಡಿಗಳನ್ನು ಮೀರಿ ಬಾಳುವ ಪರಂಪರೆಗಳನ್ನು ಸೃಷ್ಟಿಸುವ ಆಟವಾಗಿದೆ. ಕ್ರಿಕೆಟ್ ಇಂದಿನ ಯುವ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಪ್ರಮುಖ ಕ್ರೀಡೆ ಆಗಿದೆ. ಮಾನಸಿಕ ಮತ್ತು ದೈಹಿಕವಾಗಿ ಪ್ರತಿಯೊಬ್ಬರನ್ನು ಸಧೃಢರನ್ನಾಗಿ ಮಾಡುತ್ತದೆ ಎಂದು ಮಾಜಿ ಸಚಿವರು ಹೇಳಿದರು.
ನಗರ ಘಟಕದ ಬಿಜೆಪಿ ಅಧ್ಯಕ್ಷ ಸಾಯಿಬಾಬಾ ಆನೆಗುಂದಿ, ತಾಲೂಕ ಅಧ್ಯಕ್ಷ ಮುತ್ತಣ್ಣ ಮನಮಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕಾತರಕಿ, ಪುರಸಭೆ ಸದಸ್ಯ ಮಹಾಂತೇಶ ಕಲಾಲ, ರೋಹನ ಪಾಟೀಲಮುನೇನಕೊಪ್ಪ, ಯುವ ಮುಖಂಡ ವಿನಾಯಕ ದಾಡಿಬಾವಿ, ಸಿಧ್ಧನಗೌಡ ಪಾಟೀಲ, ಅಣ್ಣಪ್ಪ ಬಾಗಿ, ಶರಣಪ್ಪಗೌಡ ದಾನಪ್ಪಗೌಡರ, ನಿಂಗಪ್ಪ ಬಾರಕೇರ, ಆನಂದ, ಮಲ್ಲಿಕಾರ್ಜುನಗೌಡ ಸಂಗನಗೌಡ, ಚಂದ್ರು ಕುಂದಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.