ನವಲಗುಂದಕ್ಕೆ ನೂತನ ಸಿಪಿಐ: ಚಂದ್ರಶೇಖರ ಮಠಪತಿ ಅಧಿಕಾರಿ ಸ್ವೀಕಾರ

ಧಾರವಾಡ: ಜಿಲ್ಲೆಯ ಪ್ರಮುಖ ಪಟ್ಟಣವಾದ ನವಲಗುಂದ ಪೊಲೀಸ್ ಆರಕ್ಷರ ವೃತ್ತಕ್ಕೆ ವರ್ಗಾವಣೆಗೊಂಡಿರುವ ಚಂದ್ರಶೇಖರ ಮಠಪತಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬಾಲಗಕೋಟೆಯ ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ, ದಕ್ಷ ಮತ್ತು ಖಡಕ್ ಆಫೀಸರ್ ಎಂದೇ ಹೆಸರುವಾಸಿವಾಗಿದ್ದಾರೆ. 2005ರ ಬ್ಯಾಚಿನ್ ಇವರು, ಹಲವು ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚಿ ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದಾರೆ.
ನವಲಗುಂದ ವ್ಯಾಪ್ತಿಯ ಆರಕ್ಷಕ ನಿರೀಕ್ಷಕರಾಗಿರುವ ಚಂದ್ರಶೇಖರ, ಯಾವುದೇ ಅಪರಾಧ ಪ್ರಕರಣಗಳು ನಡೆಯದಂತೆ ಜಾಗೃತೆ ವಹಿಸಲಿದ್ದಾರೆ.