ನೊಂದ ಜನರ ಕಣ್ಣೀರು ಒರೆಸಿದ ಸಚಿವ ಶಂಕರ ಪಾಟೀಲಮುನೇನಕೊಪ್ಪ….

ನವಲಗುಂದ: ಕೊರೋನಾ ಸಮಯದಲ್ಲಿ ಜೀವ ಕಳೆದುಕೊಂಡ ಕುಟುಂಬದ ಆರ್ಥಿಕ ಸ್ಥಿತಿಯನ್ನ ಸುಧಾರಣೆ ಮಾಡುವ ಜೊತೆಗೆ, ನೊಂದ ಕುಟುಂಬದ ಜೊತೆ ಸದಾಕಾಲ ನಾನಿರುತ್ತೇನೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.
ನವಲಗುಂದ ತಹಶೀಲ್ದಾರ ಕಚೇರಿಯಲ್ಲಿ ಕೊರೋನಾದಿಂದ ಸಾವಿಗೀಡಾದ ಕುಟುಂಬಗಳಿಗೆ ಚೆಕ್ ವಿತರಣೆ ಮಾಡಿದ ಸಮಯದಲ್ಲಿ ಸಚಿವ ಮುನೇನಕೊಪ್ಪ ಮಾತನಾಡುತ್ತಿದ್ದರು.
ಸಾರ್ವಜನಿಕ ಬದುಕಿನಲ್ಲಿ ಸಾವುಗಳು ಸಂಭವಿಸಿದಾಗ ಆ ನೋವುಗಳು ಕುಟುಂಬವನ್ನ ಸದಾಕಾಲ ಕಾಡುತ್ತದೆ. ಅಂತಹ ಘಟನೆಗಳು ನಡೆದಾಗ ಮನಸ್ಸು ಭಾರವಾಗತ್ತೆ. ಬಂದವರ ಕಣ್ಣೀರು ನೋಡಲಾಗುವುದಿಲ್ಲ. ನೀವೂ ನಮ್ಮ ಕುಟುಂಬದವರೇ ಆಗಿರುವುದರಿಂದ, ಪ್ರತಿಯೊಬ್ಬರ ನೋವು ನನ್ನದೆ ಎಂದು ಹೇಳಿದರು.
ಉಪವಿಭಾಗಧಿಕಾರಿ ಗೋಪಾಲಕೃಷ್ಣ, ತಹಶೀಲ್ದಾರ ನವೀನ ಹುಲ್ಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.