ನವಲಗುಂದ: ಕೋವಿಡ್ ತಡೆ ‘ಮೊದಲ’ ಲಸಿಕಾ ಹಾಕಿಸಿಕೊಂಡಿದ್ದು ಯಾರೂ..!
1 min readಧಾರವಾಡ: ಕೋವಿಡ್ ತಡೆಯಲು ಇಂದಿನಿಂದ ದೇಶದಾದ್ಯಂತ ಪ್ರಾರಂಭವಾದ ಕೋವಿಶೀಲ್ಡ್ ಲಸಿಕಾಕರಣ ಕಾರ್ಯಕ್ರಮವನ್ನ ನವಲಗುಂದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಪುರಸಭೆ ಅಧ್ಯಕ್ಷ ಮಂಜು ಜಾಧವ ವಹಿಸಿಕೊಂಡಿದ್ದರು. ಉಪಾಧ್ಯಕ್ಷೆ ಖೈರುನಬಿ. ಎಚ್. ನಾಶಿಪುಡಿ, ಮುಖ್ಯವೈದ್ಯಾಧಿಕಾರಿ ರೂಪಾ ಕೆನಗಿ, ತಾಲೂಕಾ ದಂಡಾಧಿಕಾರಿ ನವೀನ ಹುಲ್ಲೂರು, ಇನ್ಸ್‌ಪೆಕ್ಟರ್ ಚಂದ್ರಶೇಖರ ಮಠಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಮುಖ್ಯ ಅತಿಥಿಗಳಾಗಿ ಡಾ ಎಸ್. ಎಂ. ದೊಡ್ಡನವರ, ಪುರಸಭೆಯ ಮುಖ್ಯಾಧಿಕಾರಿ ನಬಿಸಾಬ ಕುದಾವಂದ, ಪುರಸಭೆ ಸದಸ್ಯ ಮಾಂತೇಶ್ ಕಲಾಲ ಸೇರಿದಂತೆ ಎಲ್ಲ ಪುರಸಭೆಯ ಸದಸ್ಯರು ಮತ್ತು ತಾಲೂಕಾ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ನವಲಗುಂದ ತಾಲೂಕಿನಲ್ಲಿ ಪ್ರಥಮವಾಗಿ ಆಂಬುಲೆನ್ಸ್ ಚಾಲಕ ಲಕ್ಷ್ಮಣ ಶಿವಪ್ಪ ಅಂಗಡಿ, ಡಾ ಸುಭಾಸ ಕೊಟ್ರೆಪ್ಪ ನರಗುಂದ ಲಸಿಕೆ ಹಾಕಿಸಿಕೊಂಡವರು.