ಎನ್.ಎಚ್.ಕೋನರೆಡ್ಡಿಯವರ ಕ್ಷೇತ್ರ ನವಲಗುಂದ್ವಂತೆ: ಅಸೂಟಿಯವರೇ ನಿಮ್ಮ ಪಾಡೇನು…!!??
1 min readನವಲಗುಂದ: ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲೆಸುವುದರಲ್ಲಿ ಕೆಲವರು ನಿಸ್ಸೀಮರಿರುತ್ತಾರೆ. ಅಂತಹದೇ ಸ್ಥಿತಿಯೀಗ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.
ಯುವ ಕಾಂಗ್ರೆಸ್ ನ ಸತತ ಎರಡು ಬಾರಿ ಜಿಲ್ಲಾಧ್ಯಕ್ಷರಾಗಿರುವ ವಿನೋದ ಅಸೂಟಿಗೆ ಈ ಬಾರಿಯೂ ಟಿಕೆಟ್ ಸಿಗುವ ಲಕ್ಷಣಗಳು ಇರುವಾಗಲೇ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿದ್ದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ. ಈಗ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಎಂಬ ಸ್ಪಷ್ಟತೆ ಪಕ್ಷದ ಮುಖಂಡರಲ್ಲಿ ಇದೆಯಾದರೂ, ಜೆಡಿಎಸ್ ನಿಂದ ಬಂದಿರುವ ಕೋನರೆಡ್ಡಿಯವರು ನವಲಗುಂದ ನನ್ನ ಕ್ಷೇತ್ರ ಎನ್ನುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ನವಲಗುಂದವನ್ನ ತಮ್ಮ ತಾಲ್ಲೂಕು ಎನ್ನಬೇಕಿತ್ತೇ ಹೊರತೂ, ನನ್ನ ಕ್ಷೇತ್ರ ಎಂದು ಹೇಳಿ ಅದನ್ನ ವೀಡಿಯೋ ಮಾಡಿಸಿ ವೈರಲ್ ಮಾಡಿರೋದ್ರ ಹಿಂದೆ ರಾಜಕೀಯ ತಂತ್ರ ಅಡಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಕ್ಷೇತ್ರದ ಶಾಸಕರು ಆಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಯುವಕ ಸಿಲುಕಿಕೊಂಡ ಕಡದಳ್ಳಿಯ ಸ್ಥಳಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳಿ, ರಕ್ಷಣೆ ಮಾಡಿ ಆತನಿಗೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಸೂಚನೆ ನೀಡಿದ್ದರು. ಅಷ್ಟೇ ಅಲ್ಲ, ತಹಶೀಲ್ದಾರ ಅವರಿಗೆ, ಯುವಕನ ಮನೆಗೆ ಕಳಿಸುವ ವ್ಯವಸ್ಥೆ ಮಾಡುವಂತೆಯೂ ಹೇಳಿದ್ದರು. ಇಷ್ಟೇಲ್ಲ ಆದ ನಂತರ ಆಸ್ಪತ್ರೆಯಲ್ಲಿದ್ದ ಯುವಕನ ಬಳಿ ಹೋಗಿ ಮೊಬೈಲ್ ‘ಓಪನ್ ಸ್ಪೀಕರ್ ಆನ್ ಮಾಡಿ’ ವೀಡಿಯೋ ಮಾಡಿಸಿ… ನನ್ನ ಕ್ಷೇತ್ರ… ನನ್ನ ಕ್ಷೇತ್ರ ಎಂದಿರುವ ಗುಟ್ಟೇನು… ಯುವ ನಾಯಕ ವಿನೋದ ಅಸೂಟಿಯವರ ಪಾಡೇನು ಎಂಬುದು ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆಯಾಗಿದೆ.
ಮಾಜಿ ಸಚಿವ ಕೆ.ಎನ್.ಗಡ್ಡಿ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರ ಸ್ಥಿತಿಯೂ ಡೋಲಾಯಾನವಾಗುತ್ತದೆ ಈ ಮಾತಿನಿಂದ.