ನವಲಗುಂದ ಐಬಿ ಕಂಪೌಂಡ್‌ಗೆ ಬೈಕ್ ಡಿಕ್ಕಿ: ಸವಾರ ‘ಸ್ಪಾಟ್ ಔಟ್’…

ನವಲಗುಂದ: ಅಣ್ಣಿಗೇರಿ ರಸ್ತೆಯ ಮೂಲಕ ನವಲಗುಂದಕ್ಕೆ ಬರುತ್ತಿದ್ದ ಸವಾರನೋರ್ವ ನಿಯಂತ್ರಣ ತಪ್ಪಿ ಐಬಿ ಕಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಮಲ್ಲಸಮುದ್ರದಿಂದ ನವಲಗುಂದಕ್ಕೆ ಬರುವಾಗ ದುರ್ಘಟನೆ ನಡೆದಿದ್ದು, ಮೃತನನ್ನ ವಿಷ್ಣು ರಾಮಣ್ಣ ಪತ್ತಾರ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಬೈಕ್ ಕೂಡಾ ಜಖಂಗೊಂಡಿದ್ದು, ಮೃತ ದೇಹವನ್ನ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಿರುವ ಪೊಲೀಸರು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.