ಲಾಠಿ ಹಿಡಿದು ಫೀಲ್ಡಿಗಿಳಿದ ಪೊಲೀಸ್ ಇನ್ಸಪೆಕ್ಟರ್ ಮಠಪತಿ…!

ನವಲಗುಂದ: ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನ ಮೀರಿ ನಡೆದುಕೊಳ್ಳುತ್ತಿರುವ ಜನರನ್ನ ಮನೆಗೆ ಕಳಿಸಲು ನವಲಗುಂದ ಠಾಣೆ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಸ್ವತಃ ಫೀಲ್ಡಿಗಿಳಿದು, ಜನರನ್ನ ಚದುರಿಸುತ್ತಿದ್ದಾರೆ.

ನವಲಗುಂದ ಪಟ್ಟಣದಲ್ಲಿ ರಾತ್ರಿ ಒಂಬತ್ತು ಗಂಟೆಯಾದರೂ, ಅಂಗಡಿ-ಮುಗ್ಗಟ್ಟುಗಳನ್ನ ಬಂದ್ ಮಾಡದೇ ಮಾರುಕಟ್ಟೆಯಲ್ಲಿ ಜನ ಸಂಚಾರವಿರುವ ಕಾರಣದಿಂದ ಅವರೆಲ್ಲರನ್ನೂ ಚದುರಿಸಿದರು.

ಕೊರೋನಾ ತಡೆಗಟ್ಟುವ ಉದ್ದೇಶದಿಂದ ನೈಟ್ ಕರ್ಪ್ಯೂ ಜಾರಿಗೆ ಬಂದಿದ್ದು, ಒಂಬತ್ತು ಗಂಟೆಯಿಂದ ಬೆಳಗಿನ ಜಾವ ಆರು ಗಂಟೆಯವರೆಗೆ ಕಾರಣವಿಲ್ಲದೇ ಸಂಚಾರ ಮಾಡುವ ಹಾಗಿಲ್ಲ.
ನವಲಗುಂದ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಜನರನ್ನ ಮನವಿ ಮಾಡುವ ಮೂಲಕ ಸರಕಾರದ ಆದೇಶ ಪಾಲನೆ ಮಾಡುವಂತೆ ಎಚ್ಚರಿಕೆ ನೀಡಿದರು. ಪಿಎಸ್ಐ ಜಯಪಾಲ ಪಾಟೀಲ ಕೂಡಾ ಬಂದೋಬಸ್ತ್ ನಿಯೋಜನೆಯಲ್ಲಿ ತೊಡಗಿದ್ದಾರೆ.