Posts Slider

Karnataka Voice

Latest Kannada News

ನವಲಗುಂದ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

1 min read
Spread the love

ಅಣ್ಣಿಗೇರಿ: ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ-ಅಡ್ನೂರು-ಹಳ್ಳಿಕೇರಿ- ಬಸಾಪುರ-ನಾಗರಹಳ್ಳಿಗಳನ್ನು ಸಂಪರ್ಕಿಸುವ 1897.89 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 21.900 ಕಿ.ಮೀ.ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಜೊತೆಗೂಡಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನವಲಗುಂದ ವಿಧಾನಸಭಾ  ಕ್ಷೇತ್ರದಲ್ಲಿ 4679.04 ಲಕ್ಷ ರೂ. ವೆಚ್ಚದಲ್ಲಿ 6  ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಹಾಗೂ ಅಣ್ಣಿಗೇರಿಯಿಂದ ನಾಗರಹಳ್ಳಿ ವಯಾ ಹಳ್ಳಿಕೇರಿ, ಬಸಾಪೂರ ರಸ್ತೆ ಅಭಿವೃದ್ಧಿಗೊಳಿಸುವ ಕಾಮಗಾರಿ ಮತ್ತು ಅಣ್ಣಿಗೇರಿ-ಅಡ್ನೂರು-ಹಳ್ಳಿಕೇರಿ- ಬಸಾಪುರ-ನಾಗರಹಳ್ಳಿಗಳನ್ನು ಸಂಪರ್ಕಿಸುವ 1897.89 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 21.900 ಕಿ.ಮೀ.ಉದ್ದದ ರಸ್ತೆ ಕಾಮಗಾರಿಗಳಿಗೆ ಮತ್ತು ನವಲಗುಂದ ಮತಕ್ಷೇತ್ರದಲ್ಲಿ ನೀರಾವರಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ, 44 ಹಳ್ಳಿಗಳಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ SCP ಮತ್ತು TSP ಯೋಜನೆ ಅಡಿ CC ರಸ್ತೆ ಮತ್ತು ಸಮುದಾಯ ಭವನ ಕಾಮಗಾರಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ 17 ಕೋಟಿ ರೂಪಾಯಿ ಅನುದಾನದಲ್ಲಿ ಚಕ್ಕಡಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಿತು.

ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಕ್ರೆಡೆಲ್ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ, ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಗ್ರಾಮದ ಗುರುಹಿರಿಯರು, ರೈತರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed