ಅಣ್ಣಿಗೇರಿ ಪುರಸಭೆ “ವ್ಯವಸ್ಥಾಪಕ” ನಾಸಿಪುಡಿ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆ…

ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಶಾನೂರಸಾಹೇಬ ನಾಶಿಪುಡಿ ಆಯ್ಕೆ
ಧಾರವಾಡ: ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಧಾರವಾಡ ಜಿಲ್ಲೆಯ ಅಧ್ಯಕ್ಷರನ್ನಾಗಿ ಎಸ್.ಎಚ್. ನಾಶಿಪುಡಿ ಅವರನ್ನ ಆಯ್ಕೆ ಮಾಡಲಾಗಿದೆ.
ಮೂಲತಃ ನವಲಗುಂದ ಪಟ್ಟಣದ ಎಸ್.ಎಚ್. ನಾಶಿಪುಡಿ ಅವರು ಧಾರವಾಡ ಜಿಲ್ಲಾಧಿಕಾರಿ ಕಾರ್ಯಾಲಯ, ಸವದತ್ತಿಯ ಪುರಸಭೆ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ, ಶಿರಹಟ್ಟಿಯ ಪಟ್ಟಣ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸಿದ್ದು, ಸಧ್ಯ ಅಣ್ಣಿಗೇರಿಯ ಪುರಸಭೆ ಕಾರ್ಯಾಲಯದಲ್ಲಿ ಕಚೇರಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಎಸ್.ಎಚ್.ನಾಶಿಪುಡಿಯವರು ಕೇವಲ 29 ವಯಸ್ಸಿನವರಾಗಿದ್ದು, ಸಂಘಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದು, ನೌಕರರ ಹಿತ ಕಾಯುವಲ್ಲಿ ಸಫಲರಾಗಿದ್ದಾರೆ. ಅವರ ದಕ್ಷತೆಯನ್ನ ಗಮನಿಸಿ, ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದ್ದು, ಅವರ ಸೇವಾ ಮನೋಭಾವವನ್ನ ತೋರಿಸತ್ತೆ.
ಪೌರ ಸೇವಾ ನೌಕರರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸಿ, ಅವರಿಗೆ ನೆಮ್ಮದಿ ಸಿಗುವ ಯೋಚನೆಗಳು ನಾಶಿಪುಡಿ ಅವರಲ್ಲಿದ್ದು, ಅವುಗಳು ಕೂಡಾ ಬೇಗನೇ ಸಾಕಾರಗೊಳ್ಳಲಿವೆ ಎಂಬ ಭರವಸೆಯನ್ನ ನೂತನ ಜಿಲ್ಲಾಧ್ಯಕ್ಷ ಎಸ್.ಎಚ್. ನಾಶಿಪುಡಿ ಹೊಂದಿದ್ದಾರೆ.