Posts Slider

Karnataka Voice

Latest Kannada News

ಯುವಕನ ಕೊಲೆ-ನರಗುಂದಕ್ಕೆ ಭೇಟಿ ನೀಡಿದ MLC ಸಲೀಂ ಅಹ್ಮದ….!

1 min read
Spread the love

ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆಗ್ರಹ..

ನರಗುಂದ: ಇತ್ತೀಚೆಗೆ ನರಗುಂದ ಪಟ್ಟಣದಲ್ಲಿ ಹತ್ಯೆಯಾದ ಸಮೀರ ಸುಭಾನಸಾಬ ಶಹಪೂರ್ ಅವರ ಕುಟುಂಬಕ್ಕೆ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ ಭೇಟಿ ನೀಡಿ ನೊಂದ ಕುಟುಂಬಕ್ಕೆ ಧೈರ್ಯ ತುಂಬಿದರು.

ಗದಗ ಜಿಲ್ಲೆಯ  ಕೋಮು ಸಾಮರಸ್ಯಕ್ಕೆ  ಹೆಸರುವಾಸಿಯಾಗಿದೆ. ಶರಣರು, ಮಹಾತ್ಮರು, ಸಂತ-ಸೂಪಿಗಳು ಹುಟ್ಟಿದ ನಾಡಿನಲ್ಲಿ ಇಂತಹ  ಘಟನೆ ನಡೆದದ್ದು  ದುರದೃಷ್ಟಕರ ಎಂದು ಹೇಳಿದರು.

ಕೂಡಲೇ ಪೊಲೀಸ ಇಲಾಖೆಯೂ ಈ ಘಟನೆಗೆ ಕಾರಣರಾದ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು  ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ  ನ್ಯಾಯಾಂಗ ತನಿಖೆಗೊಳಪಡಿಸಬೇಕು  ಎಂದು ಆಗ್ರಹಿಸಿದರು.

ಮೃತ ಕುಟುಂಬದವರಿಗೆ ಸೂಕ್ತವಾದ ಪರಿಹಾರ ನೀಡಬೇಕು. ಇಂತಹ ಘಟನೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತವೆ. ಇಂತಹ  ಪ್ರಕರಣಗಳು ಮುಂದೆ ಎಂದಿಗೂ ಮರುಕಳಿಸಬಾರದು. ಪ್ರತಿಯೊಬ್ಬರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸೌಹಾರ್ಧತೆಯಿಂದ ಪ್ರತಿಯೊಬ್ಬರು ಜೀವಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಎಚ್.ಕೆ ಪಾಟೀಲ್, ಮಾಜಿ ಶಾಸಕರುಗಳಾದ ಬಿ.ಆರ್.ಯಾವಗಲ್,  ಡಿ.ಆರ್.ಪಾಟೀಲ, ಮಾಜಿ ಸಚಿವ ಜಿ.ಎಸ್.ಪಾಟೀಲ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್  ಸಮಿತಿ ಗದಗ  ಹಾಗೂ ಕಾಂಗ್ರೆಸ್ ಮುಖಂಡರು  ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed