ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ: ಹಿಂದು ಮುಖಂಡ ಜಯತೀರ್ಥ ಕಟ್ಟಿ ಟೀಂ “ಸ್ಥಳ” ಪರಿಶೀಲನೆ…

ಹುಬ್ಬಳ್ಳಿಯ ಫೈರ್ ಬ್ರ್ಯಾಂಡ್ ತೆಲಂಗಾಣದಲ್ಲಿ
ಪ್ರಧಾನಿ ನರೇಂದ್ರ ಮೋದಿ ಬರುವ ಮುನ್ನ ಸ್ಥಳ ಪರಿಶೀಲನೆ
ತೆಲಂಗಾಣ: ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ನಾಟಕದ ಪ್ರಮುಖರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ಚುನಾವಣಾ ಪ್ರಚಾರಾರ್ಥವಾಗಿ ಇದೇ ತಿಂಗಳ 25 ರಂದು ಪ್ರಧಾನಿ Narendra Modi ಅವರು ಕಾಮರೆಡ್ಡಿ ಜಿಲ್ಲೆಗೆ ಆಗಮಿಸಲಿದ್ದಾರೆ. ಹೀಗಾಗಿ ಇಂದು SPG ತಂಡದೊಂದಿಗೆ ಸಮಾರಂಭದ ಪೂರ್ವ ತಯಾರಿಗಳನ್ನು ಪರಿಶೀಲನೆಯನ್ನ ನಡೆಸಿದರು. SPG ತಂಡವು ಪ್ರಧಾನಿಗಳ ಭದ್ರತೆಗಾಗಿ ವಹಿಸಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿತು.
ಈ ವೇಳೆ ಕಾಮರೆಡ್ಡಿ ಜಿಲ್ಲೆಯ ಪ್ರಭಾರಿ ಜಿಲ್ಲಾಧ್ಯಕ್ಷ ಭರತ್ ಹಾಗೂ ಮುಖಂಡರಾದ ಗಂಗಾರಾಮ್ ಉಪಸ್ಥಿತರಿದ್ದರು.