ನರೇಂದ್ರ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗಲೇ “ಹಾರ್ಟ್ ಅಟ್ಯಾಕ್” ಸವಾರ ಸಾವು….

ಧಾರವಾಡ: ಸವಾರನೋರ್ವ ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಂಗಳಗಟ್ಟಿ ರಸ್ತೆಯಲ್ಲಿ ಸಂಭವಿಸಿದೆ.
ಮೂಲತಃ ಯಡಳ್ಳಿ ಗ್ರಾಮದ ದುರ್ಗಪ್ಪ ಹರಿಜನ ಎಂಬ ವ್ಯಕ್ತಿಯೇ ಸಾವಿಗೀಡಾಗಿದ್ದು, ಈತ ಕುರುಬಗಟ್ಟಿ ಗ್ರಾಮದಲ್ಲಿ ವಾಸವಿದ್ದನೆಂದು ಗೊತ್ತಾಗಿದೆ.
ವೀಡಿಯೋ…
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.