ತುತ್ತು ಅನ್ನಕ್ಕಾಗಿ ಗೌಂಡಿಯಾಗಿದ್ದವರಿಗಿಂದು ಜಿಲ್ಲಾ ಪ್ರಶಸ್ತಿ- ಪಬ್ಲಿಕ್ ಹೀರೊ
1 min readಈ-ಟಿವಿ ಆಫೀಸ್ ಬಾಯ್ ಆಗಿದ್ದ ನಾರಾಯಣಗೌಡ ಪಾಟೀಲನ ತಂದೆ ಮಲ್ಲನಗೌಡ ಪಾಟೀಲ 2011ರಲ್ಲೇ ತೀರಿಕೊಂಡಿದ್ದಾರೆ. ತಾಯಿ ಮಹಾದೇವಿ ಮುರಗೋಡದಲ್ಲಿದ್ದಾರೆ. ಪತ್ನಿ ಪೂಜಾ ಹಾಗೂ ಮಗಳು ಧಕ್ಷೀತಾ ಜೊತೆ ಹುಬ್ಬಳ್ಳಿಯಲ್ಲೇ ನಾರಾಯಣ ವಾಸವಾಗಿದ್ದಾನೆ.
ಹುಬ್ಬಳ್ಳಿ: ಮನೆಯಲ್ಲಿ ಬಡತನ. ದುಡಿಯದಿದ್ದರೇ ಅವತ್ತಿನ ಊಟಕ್ಕೂ ತೊಂದರೆ. ಕಾಲೇಜು ಕಲಿಯುತ್ತಿದ್ದಾಗಲೇ ಮನೆತನವನ್ನ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ. ಬೇರೆಯವರ ಹೊಲದಲ್ಲಿ ಕೆಲಸ ಮಾಡುವ ತಾಯಿ, ರೇಷನ್ ಕೊಡುವಲ್ಲಿ ಕಾರ್ಯನಿರ್ವಹಿಸುವ ತಂದೆ. ಅದೇ ಕಾರಣಕ್ಕೆ ಸಿಕ್ಕ ಸಿಕ್ಕ ಕೆಲಸವನ್ನ ಮಾಡಿಕೊಂಡು ಇರುತ್ತಿದ್ದ ಯುವಕನಿಗಿಂದು ಜಿಲ್ಲಾ ಪ್ರಶಸ್ತಿ ಲಭಿಸಿದೆ. ಇದಕ್ಕೆ ಕಾರಣವಾಗಿದ್ದು, ಅವರ ಬಳಿಯಿರುವ ಕೆಲಸದ ಶ್ರದ್ಧೆ..
ಹೌದು.. ನಾರಾಯಣಗೌಡ ಪಾಟೀಲ ನಿಮಗೆ ಗೊತ್ತಿರುತ್ತಾರೆ. ಉತ್ತರ ಕರ್ನಾಟಕ ಹಲವೆಡೆ ಹೋಗಿ ಈತ ಕರ್ತವ್ಯ ನಿರ್ವಹಿಸಿ ಬರುತ್ತಿರುತ್ತಾನೆ. ಅಂದ ಹಾಗೇ ಇವರು ಪಬ್ಲಿಕ್ ಟಿವಿ ಹುಬ್ಬಳ್ಳಿಯ ಕ್ಯಾಮರಾಮನ್. ಜಿಲ್ಲಾ ಪತ್ರಕರ್ತರ ಸಂಘ ಕೊಡುವ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಶೂಟ್ ಮಾಡಿದ ವಯೋವೃದ್ಧರ ಆಶಾಕಿರಣ ಹಗಲು ತಂಗುದಾಣ ವರದಿ ಆಯ್ಕೆಯಾಗಿದೆ. ವರದಿಗಾರನಾಗಿದ್ದು, ನವೀನ ಪರದೇಶಿ.
ನಾರಾಯಣಗೌಡನನ್ನ ಎಲ್ಲರೂ ಪ್ರೀತಿಯಿಂದ ಕರೆಯೋದು ನಾರಾಯಣ ಅಂತಲೇ. ಮೂಲತಃ ಸವದತ್ತಿ ತಾಲೂಕಿನ ಮುರಗೋಡದಾತ. ಪಿಯುಸಿ ಪೂರ್ವದಲ್ಲೇ ಉಪಜೀವನಕ್ಕಾಗಿ ಗೌಂಡಿ, ಪೇಟಿಂಗ್, ಬೋರವೆಲ್ ರಿಪೇರಿ.. ಹೀಗೆ ಸಿಕ್ಕ ಕೆಲಸವನ್ನ ಶ್ರದ್ಧೆಯಿಂದ ಮಾಡುತ್ತಲೇ ಬೆಳೆದ. ಪಿಯುಸಿ ಪರೀಕ್ಷೆ ಬರೆದು ಸೀದಾ ಹುಬ್ಬಳ್ಳಿಗೆ ಬಂದು ಈ ಟಿವಿಯ ಆಪೀಸ್ ಬಾಯ್ ಆಗಿದ್ದವರು, ಎರಡೇ ವರ್ಷದಲ್ಲಿ ಪಬ್ಲಿಕ್ ಟಿವಿಯ ಕ್ಯಾಮರಾಮನ್ ಆದರು. ನಂತರ ಬದುಕು ಒಂದು ಹಂತಕ್ಕೆ ಬಂದು ತಲುಪಿದೆ.
ಸಧ್ಯ ಹುಬ್ಬಳ್ಳಿಯಲ್ಲೇ ವಾಸವಾಗಿರುವ ನಾರಾಯಣನಿಗೆ ಒಂದು ಹೆಣ್ಣು ಮಗುವಿದೆ. ಇಂತಹ ಕಾಯಕಯೋಗಿಯನ್ನ ಆಯ್ಕೆ ಮಾಡಿದ, ಜಿಲ್ಲಾ ಪತ್ರಕರ್ತರ ಸಂಘಕ್ಕೂ ಅಭಿನಂದನೆ ತಿಳಿಸಲೇಬೇಕು. ಒನ್ಸ್ ಅಗೇನ್ ಗುಡ್ ಲಕ್ ನಾರಾಯಣಗೌಡ.. ನಂಪ್ರೀತಿಯ ನಾರಾಯಣ…