ನಾಗೋಸಾ ಕಲಬುರ್ಗಿಯವರೇ ‘ಶೂ’ ಹಾಕಿಕೊಂಡು ಧ್ವಜಾರೋಹಣ ಮಾಡಬಹುದೇ..? ತೌ.. ಕಾ..ಕರೇವ್ ಅಣ್ಣಾ…!
ಹುಬ್ಬಳ್ಳಿ: ಮೊದಲ ಬಾರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಾಗೋಸಾ ಕಲಬುರ್ಗಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡುವಾಗ ಶೂ ಧರಿಸಿ ಧ್ವಜಾರೋಹಣ ಮಾಡಿದ್ದು, ಹಲವರಲ್ಲಿ ಬೇಸರ ಮೂಡಿಸಿದೆ.
ಪೊಲೀಸ್ ಆಯುಕ್ತರ ಪಕ್ಕದಲ್ಲಿರುವ ಕಚೇರಿ ಮುಂಭಾಗದಲ್ಲಿ ನಡೆದ ಧ್ವಜಾರೋಹಣದ ವೇಳೆಯಲ್ಲಿ ಧ್ವಜದ ಕಟ್ಟೆಯ ಮೇಲೆ ಶೂ ಹಾಕಿಕೊಂಡು ಧ್ವಜಾರೋಹಣ ಮಾಡಿದ್ದಾರೆ. ಅವರ ಜೊತೆಗಿದ್ದಅಧಿಕಾರಿಗಳು ಶೂ ಬಿಟ್ಟು ಮೇಲೆ ಬಂದಿರುವುದನ್ನೂ ಗಮನಿಸಿಯಾದರೂ ನಾಗೋಸಾ ಕಲಬುರ್ಗಿ, ಶೂ ಕೆಳಗೆ ಬಿಟ್ಟು ಧ್ವಜಾರೋಹಣ ಮಾಡಬೇಕಿತ್ತು.
ಪ್ರತಿಸಲವೂ ದೇಶದ ಬಗ್ಗೆಯೂ ಗೌರವದ ಬಗ್ಗೆಯೂ ಮಾತಾಡುವ ಶಿಸ್ತಿನ ಪಕ್ಷದಿಂದಲೇ ಅಧಿಕಾರ ಪಡೆದಿರುವ ನಾಗೋಸಾ ಕಲಬುರ್ಗಿ ಹೀಗೇಕೆ ಮಾಡಿದರು. ಶೂ ತೆಗೆದು ಧ್ವಜಾರೋಹಣ ಮಾಡಬೇಕಿತ್ತು ಎಂದು ಅವರಿಗೆ ಅನಿಸಲೇ ಇಲ್ಲವೇ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ.