ಪಂಚಮಸಾಲಿ ಹೋರಾಟದ ವೇದಿಕೆಯಲ್ಲೇ ಶಾಸಕ ಅರವಿಂದ ಬೆಲ್ಲದರಿಗೆ ಟಕ್ಕರ್…!
1 min readಬೆಂಗಳೂರು: ಪಂಚಮಸಾಲಿ ಸಮುದಾಯದ ಹೋರಾಟದಲ್ಲಿ ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಂರ ನಾಲ್ಕು ಪರ್ಸಟೇಜ್ ಕೇಳುವುದು ಯಾರ ಉದ್ದೇಶವೂ ಇಲ್ಲ. ಅಂತಹದ್ದನ್ನ ಹುಟ್ಟಿ ಹಾಕುವುದನ್ನ ಮಾಡಲಾಗುತ್ತಿದೆ ಎಂದು ಲಿಂಗಾಯತ ಸಮುದಾಯದ ಮುಖಂಡ ನಾಗರಾಜ ಗೌರಿ, ಶಾಸಕ ಅರವಿಂದ ಬೆಲ್ಲದ್ ಅವರ ಹೇಳಿಕೆಯನ್ನ ಖಂಡಿಸಿದರು.
ನಾಗರಾಜ ಗೌರಿ ಹೇಳಿದ್ದೇನು… ವೀಡಿಯೋ ಇದೆ ನೋಡಿ..
ಕೆಲವು ದಿನಗಳ ಹಿಂದೆ ಶಾಸಕ ಅರವಿಂದ ಬೆಲ್ಲದ ಹೇಳಿಕೆಯೊಂದನ್ನ ನೀಡಿ, ಮುಸ್ಲಿಂರ ನಾಲ್ಕು ಪರ್ಸೆಂಟೇಜ್ ನ್ನ ಪಂಚಮಸಾಲಿ ಸಮುದಾಯಕ್ಕೆ ನೀಡಬೇಕೆಂದು ಹೇಳಿದ್ದರು. ಅದಕ್ಕೆ ಸ್ಪಷ್ಟವಾಗಿ ತಿರುಗೇಟು ನೀಡಿದ ನಾಗರಾಜ ಗೌರಿ, ಮುಸ್ಲಿಂರು ಪಂಚಮಸಾಲಿ ಹೋರಾಟದಲ್ಲಿ ಸಾಕಷ್ಟು ಸಹಕಾರ ನೀಡಿದ್ದಾರೆ. ಅವರ ಪರ್ಸೆಂಟೇಜ್ ಕೇಳುವ ಉದ್ದೇಶ ಯಾರದ್ದೂ ಇಲ್ಲವೆಂದರು.
ಶಾಸಕ ಅರವಿಂದ ಬೆಲ್ಲದ ಅವರ ಹೆಸರನ್ನ ಹೇಳದೇ, ಕೆಲವರು ಹೋರಾಟವನ್ನ ದಾರಿ ತಪ್ಪಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ ನಾಗರಾಜ ಗೌರಿ, ಮುಸ್ಲಿಂರ ಮೀಸಲಾತಿಯನ್ನ ಕೇಳುವ ಉದ್ದೇಶ ಮಹಾಸ್ವಾಮಿಗಳದ್ದು ಇಲ್ಲವೆಂದರು.
ಬೆಂಗಳೂರಿನಲ್ಲಿ ನಡೆದ ಹೋರಾಟದ ಸ್ಥಳದಲ್ಲಿ ಕೂಡಲಸಂಗಮದ ಶ್ರೀ ಜಯ ಮೃತ್ಯುಂಜರ ಮಹಾಸ್ವಾಮಿಗಳು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ವಿಜಯ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.