ಕ್ರಿಯಾಶೀಲ ಪತ್ರಕರ್ತ ನಾಗರಾಜ ದೀಕ್ಷಿತ ಇನ್ನಿಲ್ಲ
ಬೆಂಗಳೂರು: ಕ್ರಿಯಾಶೀಲ ಪತ್ರಕರ್ತ ಹಾಗೂ ಕಲಾವಿದರಾಗಿದ್ದ ನಾಗರಾಜ ದೀಕ್ಷಿತ ತೀವ್ರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಹಲವು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ನಾಗರಾಜ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಹೊಸ ಹೊಸ ಆಲೋಚನೆಗಳೊಂದಿಗೆ ಜನರ ಜೀವನ ಸ್ಥಿತಿಗಳನ್ನ ಸರಕಾರದ ಗಮನಕ್ಕೆ ತರುವ ಮೂಲಕ ಮಾಡುತ್ತಿದ್ದರು.
ಯಾವುದೇ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಲಿ ಅಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸುತ್ತಿದ್ದ ನಾಗರಾಜ ದೀಕ್ಷಿತರ ಸಾವು ಮಾಧ್ಯಮಲೋಕದಲ್ಲಿ ತೀವ್ರ ಆಘಾತ ಮೂಡಿಸಿದೆ.
ಹೃದಯಾಘಾತದಿಂದ ತೀರಿಕೊಂಡಿದ್ದ ನಾಗರಾಜರ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದ್ದು ಇಂದು ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.