Posts Slider

Karnataka Voice

Latest Kannada News

‘ನಾನು ಮತ್ತು ಗುಂಡ 2’… ವಿಜಯಪ್ರಸಾದ್ ಕಂಠದಲ್ಲಿ ಶಿವನ ಹಾಡು

Spread the love

ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ

ಆರ್.ಪಿ.ಪಟ್ನಾಯಕ್ ಸಂಗೀತ

ಗುಂಡ(ನಾಯಿ) ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆಯಿದ್ದ ಚಿತ್ರ ‘ನಾನು ಮತ್ತು ಗುಂಡ’ ಈಗಾಗಲೇ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ನಾಯಕನಾಗಿ ನಟಿಸಿದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾದ ‘ನಾನು ಮತ್ತು ಗುಂಡ-2’ ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದು ,ಆ ಚಿತ್ರವೀಗ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ 5ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಡಾ.ವಿ.ನಾಗೇಂದ್ರಪ್ರಸಾದ್ ಶಿವನ ಮೇಲೆ ರಚಿಸಿರುವ ಹಾಗೂ ವಿಜಯಪ್ರಕಾಶ್ ದನಿಯಾಗಿರುವ ‘ಓಂ ಶಿವಾಯ, ನಮೋ ಶಿವಾಯ’ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು, ನಾನು ಮತ್ತು ಗುಂಡ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿತ್ತು. ಅದರ ಮುಂದುವರಿದ ಭಾಗಕ್ಕೆ ರಘುಹಾಸನ್ ನಿರ್ದೇಶನದ ಜತೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಈ ಚಿತ್ರದಲ್ಲಿ ರಾಕೇಶ್ ಆಡಿಗ, ರಚನಾ ಇಂದರ್ ನಾಯಕ ನಾಯಕಿಯಾಗ ನಟಿಸಿದ್ದಾರೆ.

ಬಹಳ ದಿನಗಳ ನಂತರ ಆರ್‌ಪಿ ಅವರ ಸಂಗೀತದಲ್ಲಿ ಹಾಡಿರುವುದು ಖುಷಿಯಾಗಿದೆ, ಚಿತ್ರ ಪ್ರೇಕ್ಷಕರ ಮನ ಗೆಲ್ಲಲಿ ಎಂದು ಗಾಯಕ ವಿಜಯ ಪ್ರಕಾಶ್ ವಿಡಿಯೋ ಮೂಲಕ ಶುಭ ಹಾರೈಸಿದರು. ನಂತರ ವೇದಿಕೆಯಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡುತ್ತ ರಘುಹಾಸನ್ ಈ ಸಾಂಗ್ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು, ಕಥೆ ಹೇಳಿದ ಹಾಗಿರಬಾರದು, ಆದರೆ ಲೈನ್ಸ್ ಕಥೆ ಹೇಳುವಂತಿರಬೇಕು, ಮನಸಿಗೆ ಇಳಿಯುವಂಥ ಕಂಟೆಂಟ್ ಈ ಹಾಡಲ್ಲಿದೆ, ಇದು ಪಕ್ಕಾ ಚಿತ್ರಗೀತೆ, ಸಿನಿಮಾದಲ್ಲಿ ನೋಡಿದಾಗ ತುಂಬಾ ಇಂಪ್ಯಾಕ್ಟ್ ಆಗುತ್ತೆ ಟ್ರೈಲರ್‌ನಲ್ಲಿ ಎಲ್ಲಾ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಘುಹಾಸನ್, ಮಾತನಾಡುತ್ತ ನಮ್ಮ ಚಿತ್ರ 2022ರಲ್ಲಿ ಪ್ರಾರಂಭವಾಗಿತ್ತು, ಇದೀಗ ಬಿಡುಗಡೆಯಾಗುತ್ತಿದೆ, ಸಂಗೀತ ನಿರ್ದೇಶನ ಪಟ್ನಾಯಕ್ ಅವರು ಈ ಹಾಡಿನ ಟ್ಯೂನ್ ಕೊಟ್ಟಾಗ ತಕ್ಷಣ ನೆನಪಾಗಿದ್ದೇ ನಾಗೇಂದ್ರ ಪ್ರಸಾದ್, ಲಿರಿಕ್ ಇಷ್ಟಪಟ್ಟು ವಿಜಯ ಪ್ರಕಾಶ್ ಸೊಗಸಾಗಿ ಹಾಡಿಕೊಟ್ಟರು, ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕೆಂದಾಗ ಹುಟ್ಟಿದ್ದೇ ಗುಂಡನ ಕಥೆ, ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ ‘ಯು/ಎ’ ಕೊಟ್ಟಿದೆ, ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ. ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದಲ್ಲಿ 6 ಹಾಡುಗಳನ್ನು ಆರ್.ಪಿ. ಪಟ್ನಾಯಕ್ ಅವರು ಕಂಪೋಜ್ ಮಾಡಿಕೊಟ್ಟಿದ್ದಾರೆ. ತನ್ವಿಕ್ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಿದರು. ಉಳಿದಂತೆ ನಾಯಕ ರಾಕೇಶ್ ಅಡಿಗ, ನಾಯಕಿ ರಚನಾ ಇಂದರ್, ಛಾಯಾಗ್ರಾಹಕ ತನ್ವಿಕ್, ಬಾಲನಟ ಜೀವನ್ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.

ಈ ಚಿತ್ರದಲ್ಲಿ ಡಾಗ್ ಸಿಂಬನ ಮಗ ನಟಿಸಿದ್ದಾನೆ. ಸಿಂಬ ನಾಲ್ಕು ದಿನವಷ್ಟೇ ಶೂಟಿಂಗ್‌ನಲ್ಲಿ ಭಾವಹಿಸಿ ಮೃತನಾಗಿದ್ದ. ನಂತರ ಅವನ ಮಗ ಸಿಂಬ ನಟಿಸಿದ್ದಾನೆ. ಶಂಕರನ ಮಗ ಹಾಗೂ ನಾಯಿಯ ಪಾತ್ರದ ಮೂಲಕ ಎರಡನೇ ಭಾಗದ ಚಿತ್ರಕಥೆ ಮುಂದುವರೆಯಲಿದೆ. ಅಲ್ಲದೆ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಈ ಚಿತ್ರದಲ್ಲಿ ಅಭಿನಯಿಸಿದೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ರಘು ಹಾಸನ್ ಅವರೇ ನರ್ಮಿಸಿರುವ ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ. ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದೆ. ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.ಡಿಯಾ ಲೆವೆಲ್ ನಲ್ಲಿ ಮೂಡಿ ಬರಲಿದೆ. ಈ ಚಿತ್ರವನ್ನು ದಸರಾಗೆ ಲಾಂಚ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ವರ್ಷದ ಕೊನೆಗೆ ಶೂಟಿಂಗ್ ಆರಂಭವಾಗಲಿದೆ.


Spread the love

Leave a Reply

Your email address will not be published. Required fields are marked *