ಮೈಸೂರಲ್ಲಿ ಹೊಟೇಲ್-ರೆಸ್ಟೋರೆಂಟ್ ಪಾರ್ಸಲ್ ಅವಕಾಶ: ರವಿವಾರ ತೊಂದರೆಯಿಲ್ಲ

ಮೈಸೂರು: ರವಿವಾರ ಸಂಪೂರ್ಣ ಲಾಕ್ ಡೌನ್ ಇದ್ದರೂ ಕೂಡಾ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶವಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದ್ದಾರೆ.
ನಾಳೆ ಅನಗತ್ಯವಾಗಿ ಹೊರಗಡೆ ಬಂದ್ರೆ ಕ್ರಿಮಿನಲ್ ಕೇಸ್. ನಾಳೆ ಬೆಳಿಗ್ಗೆ 7 ರಿಂದ ಸೋಮವಾರ ಬೆ. 7ರ ವರೆಗೆ ಸಂಪೂರ್ಣ ಲಾಕ್ಡೌನ್. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳಿಗೆ ನಿರ್ಬಂಧ. ಹಾಲು, ದಿನಸಿ, ವೈದ್ಯಕೀಯ, ಹೋಟೆಲ್ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ. ಯಾವುದೇ ವಾಣಿಜ್ಯ ಅಂಗಡಿ ಮುಗ್ಗಟ್ಟುಗಳು ತೆರೆಯುವಂತಿಲ್ಲ. ಮೈಸೂರು ನಗರಕ್ಕೆ ಪ್ರವೇಶ ಕಲ್ಪಿಸುವ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಮಾಡಲಾಗಿದೆ. ಈಗಾಗಲೇ ಹೊರ ರಾಜ್ಯಗಳಿಂದ 700 ಮಂದಿ ಆಗಮಿಸಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅನಗತ್ಯ ಪಾಸ್ ವಿತರಣೆಗೆ ಬ್ರೇಕ್ ಹಾಕಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.