ಕೃಷಿಗೆ ನೀರು ಅಂತರ್ ರಾಜ್ಯ ವಿವಾದ: ರಮೇಶ ಜಾರಕಿಹೊಳಿ ಹೇಳಿಕೆ

ಮೈಸೂರು: ಕಾವೇರಿ, ಕಬಿನಿ ಡ್ಯಾಂಗಳು ಅಂತಾರಾಜ್ಯ ವಿವಾದ ಹೊಂದಿವೆ. ಈ ಡ್ಯಾಂಗಳಿಂದ ನೀರು ಹರಿಸುವ ಅಧಿಕಾರ ನಮಗೆ ಇಲ್ಲ. ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದ ಸಭೆ ನಡೆದಿದೆ. ಅಧಿಕಾರಿಗಳ ಸಭೆಯಲ್ಲಿ ಯಾವಾಗ ನೀರು ಬಿಡಬೇಕು ಎಂದು ಚರ್ಚೆಯಾಗಿದೆ. ಜಲಾಶಯಗಳ ಸ್ಥಿತಿಗತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಕೃಷಿಗೆ ನೀರಿನ ತೊಂದರೆ ನಿವಾರಣೆ ಮಾಡುವ ಉದ್ದೇಶದಿಂದಲೇ ಸರಕಾರ ಕ್ರಮ ಜರುಗಿಸುತ್ತಿದೆ. ಅದಕ್ಕೆ ಪೂರಕವಾದ ಸಭೆಗಳು ನಡೆಯುತ್ತಿದ್ದು, ಆದಷ್ಟು ಬೇಗ ಒಳ್ಳೆಯ ಫಲಿತಾಂಶ ಬರಲಿದೆ ಎಂದರು.