ಸರಕಾರದ ಆಹಾರದ ಕಿಟ್ ಬಿಜೆಪಿಯವರ ಪಾಲು: ಪ್ರಶ್ನಿಸಿದವನಿಗೆ ಬಿಜೆಪಿಯವರಿಂದ ಗೂಸಾ

ಮೈಸೂರು: ನೊಂದ ಬಡಜನರಿಗೆ ತಲುಪಬೇಕಾದ ಆಹಾರ ಕಿಟ್ ರಾಜಕೀಯ ಮುಖಂಡರು ಮನೆಬಾಗಿಲಿಗೆ ತಲುಪುತ್ತಿದೆ. ಬಿಜೆಪಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಮಾತ್ರ ಆಹಾರದ ಕಿಟ್ ವಿತರಣೆಯಾಗುತ್ತಿದೆ. ಈ ವಿಚಾರವನ್ನು ವಾಟ್ಸಾಪ್ ಗ್ರೂಪಿನಲ್ಲಿ ಚರ್ಚೆ ಮಾಡಿದ ಯುವಕನಿಗೆ ಹಿಗ್ಗಾಮುಗ್ಗಾ ಗೂಸಾ ಕೊಡಲಾಗಿದೆ.
ಮಾಜಿ ಮಂತ್ರಿ ಹಾಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಬಲಗೈ ಬಂಟ ಕುಂಬರಹಳ್ಳಿ ಸುಬ್ಬಣ್ಣನ ಕಡೆಯವರಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ನಂಜನಗೂಡು ತಾಲೂಕು ಕುಂಬ್ರಳ್ಳಿಯಲ್ಲಿ ಸಂಭವಿಸಿದೆ.
ದೇವಾರಾಜು ಎಂಬ ವ್ಯಕ್ತಿಯೇ ಹಲ್ಲೆಗೊಳಗಾಗಿದ್ದು, ಕುಂಬ್ರಳ್ಳಿ ಗ್ರಾಮದ ಮಹೇಶ್ ಹಾಗೂ ಕೃಷ್ಣ ಹಲ್ಲೆ ಮಾಡಿದ್ದಾರೆ. ಆಹಾರ ಕಿಟ್ ವಿತರಣೆ ವಿಚಾರದಲ್ಲಿ ವಾಟ್ಸಾಪ್ ನಲ್ಲಿ ನಡೆದ ಚರ್ಚೆ ನಡೆಸಿದ್ದ ದೇವರಾಜು. ಇದನ್ನೇ ನೆಪ ಮಾಡಿಕೊಂಡು ಮನೆ ಮುಂದೆ ಕುಳಿತಿದ್ದ ದೇವರಾಜು ಮೇಲೆ ಹಲ್ಲೆ ನಡೆದಿದ್ದು, ದೇವರಾಜುವಿನ ಬಲಗೈ ಹಾಗೂ ಬಲಗಾಲಿನ ಮೂಳೆ ಮುರಿದಿದ್ದಾರೆ. ಗಾಯಗೊಂಡ ದೇವರಾಜು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.