ಮನೆಯಲ್ಲೇ ನಮಾಜ್ ಮಾಡಿ: ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ ಆದೇಶ

ಬೆಂಗಳೂರು: ರಾಜಧಾನಿಯಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ ಮುಸ್ಲಿಂರಲ್ಲಿ ಮನವಿ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ಮಸೀದಿಗೆ ಹೋಗಿ ನಮಾಜ್ ಮಾಡಬೇಡಿ. ಮನೆಯಲ್ಲಿ ಮಾಡಿ ಎಂದು ಕೇಳಿಕೊಂಡಿದೆ.
ವೈರಸ್ ಪ್ರತಿದಿನವೂ ಅನೇಕರಲ್ಲಿ ಕಂಡು ಬರುತ್ತಿದೆ. ಒಂದೇ ಕಡೆ ಹೆಚ್ಚು ಜನ ಸೇರುವುದು ಈ ರೋಗ ಉಲ್ಬಣಕ್ಕೆ ಕಾರಣವಾಗತ್ತೆ. ಅಲ್ಲಾಹುನ ಪ್ರಾರ್ಥನೆಯನ್ನ ಮನೆಯಲ್ಲಿಯೇ ಮಾಡಿ ನೆಮ್ಮದಿಯನ್ನ ಕಾಣಿ ಎಂದು ಟ್ರಸ್ಟ್ ಕೇಳಿಕೊಂಡಿದೆ.
ತಾವಾಗಿಯೇ ನಿರ್ಣಯಕ್ಕೆ ಬಂದಿರುವ ಮುಸ್ಲಿಂ ಸಮಾಜದ ಕಾರ್ಯವನ್ನ ಪ್ರಜ್ಞಾವಂತ ನಾಗರಿಕರು ಸ್ವಾಗತಿಸಿದ್ದು, ಎಲ್ಲರೂ ಎಲ್ಲರ ಆರೋಗ್ಯಕ್ಕಾಗಿ ಬದುಕಬೇಕಿದೆ ಎಂದಿದ್ದಾರೆ.