ಹಾಲಿ ಸ್ವಾಮಿಗಳು ಸಮರ್ಪಕವಾಗಿ ಆಡಳಿತ ನಡೆಸುವಲ್ಲಿ ವಿಫಲ: ಹೀಗೆ ಹೇಳಿದ್ದು ಉನ್ನತಮಟ್ಟದಲ್ಲಿ….!
ಹುಬ್ಬಳ್ಳಿ: ಮೂರುಸಾವಿರ ಮಠದ ಶ್ರೀ ಗುರುಶಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಅವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಉನ್ನತಮಟ್ಟದ ಸಭೆಯಲ್ಲಿದ್ದು ರಾಜೀನಾಮೆ ನೀಡಿರುವ ಮಾಜಿ ಸಂಸದ ವಿಜಯ ಸಂಕೇಶ್ವರ ಹೇಳಿದರು.
ಮೂರುಸಾವಿರ ಮಠದ ಬಗ್ಗೆ ಎದ್ದಿರುವ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ ಸಂಕೇಶ್ವರ ಅವರು, ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ರಾತ್ರಿ ಹತ್ತೂವರೆಗೆ, ಶ್ರೀ ದಿಂಗಾಲೇಶ್ವರ ಸ್ವಾಮಿಗಳನ್ನ ಕರೆದುಕೊಂಡು ಬಂದಿದ್ದರು. ಅವರೇ, ಬಂದು ಇವರನ್ನ ಉತ್ತರಾಧಿಕಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರೆಂದು ಸಂಕೇಶ್ವರ ಹೇಳಿದರು.
ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳ ನಿರ್ಧಾರಗಳನ್ನ ಬದಲಿಸಿದರು. ಇದಾದ ನಂತರ ಹೀಗೆಲ್ಲ ಆಗುತ್ತಿದೆ ಎಂದ ಸಂಕೇಶ್ವರ ಅವರು, ಸ್ವಾಮೀಜಿಯವರು ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದರು.
ಹಲವು ಕಾರಣಗಳಿಂದ ನಾನು ಮಠಕ್ಕೆ ಹೋಗುವುದನ್ನೇ ಬಿಟ್ಟಿದ್ದೇನೆ. ಹಾಲಿ ಸ್ವಾಮೀಜಿಯವರು ಅಳ್ತಾಯಿರೋದು, ಸಾಲದ ದೊಡ್ಡ ಲಿಸ್ಟ್ ಕೊಡೋದು ಮಾಡ್ತಾಯಿದ್ರು. ಹೀಗಾಗಿಯೇ ನಾನು ಮಠಕ್ಕೆ ಕಾಲಿಟ್ಟಿಲ್ಲ. ಸ್ವಾಮೀಜಿಗಳ ಬಗ್ಗೆ ಪೂಜನೀಯ ಭಾವಯಿದೆ ಎಂದು ಹೇಳಿದರು.