Posts Slider

Karnataka Voice

Latest Kannada News

ಮೂರುಸಾವಿರಮಠ ಧಾರ್ಮಿಕ ಕೇಂದ್ರವೋ, ರಿಯಲ್ ಎಸ್ಟೇಟ್ ಕಚೇರಿಯೋ: ಆನಂದಯ್ಯ ಹಿರೇಮಠ

1 min read
Spread the love

ಹುಬ್ಬಳ್ಳಿ: ಭಕ್ತರಲ್ಲಿ ಧಾರ್ಮಿಕ ಮನೋಭಾವನೆ ಹುಟ್ಟಿಸಬೇಕಾದ ಮೂರುಸಾವಿರ ಮಠ ಧಾರ್ಮಿಕ ಸ್ಥಳವೋ ರಿಯಲ್ ಎಸ್ಟೇಟ್ ಕೇಂದ್ರವೋ ಎಂಬ ಸಂಶಯವನ್ನ ಶ್ರೀಮಠದ ಹಿರಿಯ ಭಕ್ತ ಆನಂದಯ್ಯ ಹಿರೇಮಠ ವ್ಯಕ್ತಪಡಿಸಿ, ಕೆಎಲ್ಇ ಸಂಸ್ಥೆ ಕಾಲೇಜ ನಿರ್ಮಾಣ ಮಾಡುತ್ತಿರುವ ಭೂಮಿಯ ವಿಷಯ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.


ಹುಬ್ಬಳ್ಳಿಯಲ್ಲಿ ಮಾತನಾಡಿದ ಆನಂದಯ್ಯ ಹಿರೇಮಠ, ಮೂರುಸಾವಿರಮಠದ ಆಸ್ತಿಯಲ್ಲಿ ಕಾಲೇಜ್ ನಿರ್ಮಾಣ ಮಾಡುವ ಬದಲು, ಮಠದ ವಿದ್ಯಾವರ್ಧಕ ಸಂಘದ ಮೂಲಕ ಕಾಲೇಜ್ ನಿರ್ಮಾಣ ಮಾಡಬೇಕಿತ್ತು. ಅದನ್ನ ಮಾಡದೇ ಇರುವುದು ಒಳ್ಳೆಯದಲ್ಲ. ಈಗ ಜಮೀನು ವಿಷಯ ನ್ಯಾಯಾಲಯದಲ್ಲಿ ಇದೆ ಎಂದರು.


ಕೆಎಲ್ಇ ಸಂಸ್ಥೆ ದಾನ ಪಡೆದ ಜಾಗದಲ್ಲಿ ಕಾಲೇಜು ಕಟ್ಟಿ ಹಣ ಮಾಡುತ್ತಾರೆ. ನಮ್ಮದೇ ಸಮಾಜದ ಯಾರನ್ನೂ ಉಚಿತವಾಗಿ ನೋಡಿದ ಉದಾಹರಣೆಗಳಿಲ್ಲ. ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಫ್ರೀ ಅಡ್ಮಿಷನ್ ಕೊಟ್ಟಿಲ್ಲ ಎಂದು ಖೇದವ್ಯಕ್ತಪಡಿಸಿದರು.
ಮೂರುಸಾವಿರ ಮಠದ ಜಮೀನಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ನಮ್ಮ ವಿರೋಧವಿದೆ ಎಂಬುದನ್ನ ಸ್ಪಷ್ಟವಾಗಿ ಹಿರೇಮಠ ಹೇಳಿದರು.

ಮೂರು ಸಾವಿರ ಮಠದ ಆಸ್ತಿ ಕೆಎಲ್‌ಇ ಸಂಸ್ಥೆಗೆ ದಾನದ ವಿಚಾರ

ಹುಬ್ಬಳ್ಳಿಯಲ್ಲಿ ಮಠದ ಭಕ್ತ ಆನಂದಯ್ಯ ಹಿರೇಮಠ ಸುದ್ದಿಗೋಷ್ಠಿ ನಡೆಸಿ ಹೇಳಿಕೆ

ಮೂರು ಸಾವಿರ ಮಠದ ಆಸ್ತಿಯನ್ನು ದಾನವಾಗಿ ಕೊಟ್ಟಿರೋದು ಕಾನೂನು ಬಾಹಿರ

ಈಗಿನ ಗುರುಸಿದ್ದ ಸ್ವಾಮೀಜಿಗಳು, ಕೆಎಲ್ಇಯವರು ಭೂಮಿ ಪೂಜೆ ಮಾಡಿದ್ದಾರೆ

ಅದು ಕೂಡ ಕಾನೂನು ಬಾಹಿರವಾಗಿದೆ, ಇಲ್ಲಿ ರಾಜಕೀಯ ದುರ್ಬಳಕೆ ಆಗುತ್ತಿದೆ

ಮಠದ ಜಾಗ ಪಡೆದು ಕೆಎಲ್ಇಯವರು ಬ್ಯುಸಿನೆಸ್ ಮಾಡುತ್ತಿದ್ದಾರೆ

ಉಚಿತವಾಗಿ ಸೇವೆ ನೀಡುತ್ತೇವೆ, ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತೇವೆ ಎಂದಿಲ್ಲ

ಕೂಡಲೇ ಮಠದ ಆಸ್ತಿಯನ್ನು ಸ್ವಾಮೀಜಿಗಳು ವಾಪಸ್ ಪಡೆಯಬೇಕು

ಮರ್ಯಾದೆಯಾಗಿ ಕೆಎಲ್ಇ ಸಂಸ್ಥೆಯು ಮಠದ ಆಸ್ತಿಯನ್ನು ವಾಪಸ್ ನೀಡಬೇಕು

ಕೆಎಲ್ಇ ಸಂಸ್ಥೆ ವಿರುದ್ಧ ಮಠದ ಭಕ್ತ ಆನಂದಯ್ಯ ಆಕ್ರೋಶ


Spread the love

Leave a Reply

Your email address will not be published. Required fields are marked *