ಮೂರುಸಾವಿರ ಮಠದ ಆಸ್ತಿ: ಇಂದು ಹೊರ ಬೀಳಲಿದೆ ಮತ್ತಷ್ಟು ‘ಸತ್ಯಗಳು’- ಸುಳ್ಳುಗಾರರು ಯಾರೂ…!
1 min readಹುಬ್ಬಳ್ಳಿ: ಪ್ರತಿಷ್ಠಿತ ಮೂರುಸಾವಿರ ಮಠದ ವಿವಾದಗಳು ಒಂದಿಲ್ಲಾ ಒಂದು ರೀತಿಯಲ್ಲಿ ನಿರಂತರವಾಗಿ ನಡೆದುಕೊಂಡು ಅಥವಾ ನಡೆಸಿಕೊಂಡು ಹೋಗಲಾಗುತ್ತಿದೆ. ಇದಕ್ಕೆ ಸತ್ಯ-ಅಸತ್ಯದ ಲೇಪನ ಕೊಡುತ್ತಿರುವುದು ಮಾತ್ರ ನಿಲ್ಲುತ್ತಿಲ್ಲ. ಯಾವ ಮಠದಲ್ಲಿ ಮಾನವ ಧರ್ಮವನ್ನ ಉಳಿಸಿಕೊಂಡು ಹೋಗಬೇಕಾಗಿದೇಯೋ ಅಲ್ಲಿಯೇ ಈ ಗೊಂದಲವನ್ನ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಹೀಗಾಗುತ್ತಿರುವುದರಿಂದ ಭಕ್ತರಲ್ಲಿ ಗೊಂದಲವೂ, ಅಚ್ಚರಿಯೂ ಆಗುತ್ತಿರುವುದು ಸುಳ್ಳಲ್ಲ.
ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯನ್ನ ಉಳಿಸಬೇಕು ಎಂದು ಹೊರಟಿರುವ ಮೂರುಸಾವಿರ ಮಠದ ಉತ್ತರಾಧಿಕಾರಿ ಎಂದು ಕರೆಸಿಕೊಳ್ಳುವ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳನ್ನ ತಪ್ಪು ಮಾಡಲು ಹೊರಟಿರುವುದು ಯಾವ ಧರ್ಮದ ಉಳಿವಿಗಾಗಿ ಎಂಬ ಪ್ರಶ್ನೆಯನ್ನ ಹಲವರು ಕೇಳುತ್ತಿದ್ದಾರೆ. ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಮಠದ ಆಸ್ತಿ ಮಠಕ್ಕೆ ಉಳಿಯಲಿ ಎಂಬುದರ ಹಿಂದಿನ ಅರ್ಥ, ಆ ಆಸ್ತಿಯನ್ನ ಅವರ ಹೆಸರಿಗೆ ಬರೆಯಲಿ ಎಂಬುದಲ್ಲ ಎನ್ನುವುದು ಕೂಡಾ ಅರ್ಥ ಮಾಡಿಕೊಳ್ಳಬೇಕಿದೆ.
ಕೆಎಲ್ಇ ಸಂಸ್ಥೆ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಮತ್ತೂ ದೇಶ ವಿದೇಶದಲ್ಲಿ ಶಾಖೆಗಳನ್ನ ಹೊಂದಿರುವ ಸಂಸ್ಥೆ, ಅದು ದಾನದ ಭೂಮಿಯಲ್ಲಿ ಮೆಡಿಕಲ್ ಕಟ್ಟುವುದು ಬೇಡ. ಮೂರುಸಾವಿರ ಮಠವೇ ಮೆಡಿಕಲ್ ಕಾಲೇಜು ಕಟ್ಟಲಿ ಎನ್ನುವುದರ ಹಿಂದೆ ಏನಾದರೂ ಷಡ್ಯಂತ್ರ ಕಂಡು ಬರುತ್ತಾ.. ! ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ಈಗಾಗಲೇ ಮೂರುಸಾವಿರ ಮಠದ ಆಸ್ತಿಯಲ್ಲಿ ಕೆಎಲ್ಇ ಸಂಸ್ಥೆಯು ಹುಬ್ಬಳ್ಳಿಯಲ್ಲಿ ಹಲವು ಕಾಲೇಜುಗಳನ್ನ ನಿರ್ಮಾಣ ಮಾಡಿದೆ. ಮೂರುಸಾವಿರ ಮಠದ ಬಗ್ಗೆ ಅಭಿಮಾನವಿದ್ದರೇ ಕಾಲೇಜು ಕಟ್ಟಿಸಿ, ಅದರ ಸಂಪೂರ್ಣ ಆಗು-ಹೋಗುಗಳನ್ನ ಮೂರುಸಾವಿರ ಮಠಕ್ಕೆ ಬಿಟ್ಟು ಕೊಡಲಿ. ಆಗ, ಕೆಎಲ್ಇ ಸಂಸ್ಥೆಯು ಕೂಡಾ, ಮೂರುಸಾವಿರ ಮಠಕ್ಕೆ ಆದಾಯವನ್ನ ಮಾಡಿದಂತಾಗುತ್ತದೆ ಎನ್ನುವುದು ಕೆಲವರಿಂದ ಕೇಳಿ ಬರುವ ಮಾತಾಗಿದೆ.
ಕೆಎಲ್ಇ ಸಂಸ್ಥೆ ನಿರ್ಮಾಣ ಮಾಡಲು ಮುಂದಾಗುತ್ತಿರುವ ಕಾಲೇಜು ಬಗ್ಗೆ ಇಂದು ಮತ್ತಷ್ಟು ಸತ್ಯಗಳು ಹೊರ ಬೀಳುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಇಂದು ಹನ್ನೊಂದು ಗಂಟೆಗೆ ಆನಂದಯ್ಯ ಹಿರೇಮಠ ಅವರು ಮಾತನಾಡಲಿದ್ದಾರೆ. ಮತ್ತಷ್ಟು ಸತ್ಯಗಳು ಹೊರ ಬೀಳುವ ಸಾಧ್ಯತೆಯಿದೆ.