ಮೂರುಸಾವಿರ ಮಠದ ಬಳಿ ಕೊರೋನಾ ಪಾಸಿಟಿವ್: ಸೀಲ್ ಡೌನ್ ಪ್ರದೇಶದಲ್ಲಿ ಐತಿಹಾಸಿಕ ಮಠ
ಹುಬ್ಬಳ್ಳಿ: ಮೂರುಸಾವಿರ ಮಠದ ಸಮೀಪದಲ್ಲೇ ಪಿ-9418 ವ್ಯಕ್ತಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಐತಿಹಾಸಿಕ ಜಾಗದಲ್ಲಿ ಭಕ್ತರು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂರುಸಾವಿರ ಮಠದ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಒಳಗಡೆ ಯಾರೂ ಹೋಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಮಠದಲ್ಲಿರುವವರಿಗೆ ಪಕ್ಕದ ಶಾಲೆಯ ಮೈದಾನದ ಮೂಲಕ ಹೊರಗೆ ಹೋಗಿ ಬರಲು ಅವಕಾಶ ಮಾಡಿಕೊಡಲಾಗಿದೆ. ಉತ್ತರ ಕರ್ನಾಟಕದ ಮಠಗಳಲ್ಲಿ ಒಂದಾದ ಮೂರುಸಾವಿರ ಮಠ ಲಾಕ್ ಡೌನ್ ನಂತರ ಪ್ರವೇಶ ಆರಂಭವಾಗಿತ್ತು. ಈಗ ಮತ್ತೆ ಸೀಲ್ ಡೌನ್ ವ್ಯಾಪ್ತಿಗೆ ಬಂದಿರುವುದು ಅನೇಕ ಭಕ್ತರಲ್ಲಿ ಬೇಸರ ಮೂಡಿಸಿದೆ.