Posts Slider

Karnataka Voice

Latest Kannada News

“ಮುರುಘಾ ಶ್ರೀ” 1ಕೇಸಲ್ಲಿ ಜಾಮೀನು: ಬಸವಪ್ರಭು ಶ್ರೀ, ಕೆ.ಬಸವರಾಜು ಏನಂದ್ರು ಗೊತ್ತಾ…!?

1 min read
Spread the love

ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆದರೆ, ಇನ್ನೊಂದು ಪ್ರಕರಣದಲ್ಲಿ ಜಾಮೀನು ದೊರೆಯಬೇಕಿರುವ ಕಾರಣ, ಜೈಲೇ ಗತಿ ಎನ್ನುವಂತೆ ಆಗಿದೆ.
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಬಳಿಕ ಹಲವು ತಿಂಗಳಿನಿಂದ ಮುರುಘಾ ಶ್ರೀಗಳು ಜೈಲು ಪಾಲಾಗಿದ್ದಾರೆ.
ಮುರುಘಾ ಶ್ರೀಗಳು ಹೈಕೋರ್ಟ್‌ ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಲಾಯಿತು. ಏಳು
ಷರತ್ತುಗಳನ್ನು ವಿಧಿಸುವುದರೊಂದಿಗೆ ಹೈಕೋರ್ಟ್‌ ಜಾಮೀನು
ಮಂಜೂರು ಮಾಡಿದೆ.

ಹೈಕೋರ್ಟ್‌ ವಿಧಿಸಿದ ಷರತ್ತುಗಳು….

1. ಪ್ರಕರಣದ ವಿಚಾರಣೆ ಮುಗಿಯುವರೆಗೆ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಬಾರದು.
2. ‍2 ಲಕ್ಷ ವೈಯಕ್ತಿಕ ಬಾಂಡ್ ನೀಡಬೇಕು
3. ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು.
4. ಸಾಕ್ಷಿಗಳನ್ನು ಬೆದರಿಸಬಾರದು.
5. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು
6. ಜಾಮೀನು ಮಂಜೂರಾಗಿ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು.
7. ನ್ಯಾಯಾಲಯ ವಿಧಿಸಿದ ಷರತ್ತು ಉಲ್ಲಂಘಿಸಿದರೆ, ಜಾಮೀನು ತನ್ನಿಂದ ತಾನೇ ರದ್ದಾಗಲಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ
ಹೇಳಿದೆ.

ಪ್ರಕರಣದಲ್ಲಿ ಜಾಮೀನು ಅರ್ಜಿ ಬಾಕಿ ಇರುವ ಕಾರಣ ಶಿವಮೂರ್ತಿ ಮುರುಘಾ ಷರಣರಿಗೆ ಪೋಕ್ಸ್ ಕೇಸ್ ನಲ್ಲಿ ಜಾಮೀನು ದೊರೆತರು ಬಿಡುಗಡೆಯ ಭಾಗ್ಯವಿಲ್ಲ.

ಚಿತ್ರದುರ್ಗದಲ್ಲಿ ಮುರುಘಾಮಠದ ಉಸ್ತುವಾರಿ ಬಸವಪ್ರಭುಶ್ರೀ ಹೇಳಿಕೆ…

ಮುರುಘಾ ಶ್ರೀಗಳಿಗೆ ಮೊದಲ ಫೋಕ್ಸೋ ಕೇಸಲ್ಲಿ ಜಾಮೀನು ಸಿಕ್ಕಿದೆ.

ಎರಡನೇ ಕೇಸಲ್ಲೂ ಜಾಮೀನು ಸಿಗುವ ನಂಬಿಕೆಯಿದೆ.

ಮುರುಘೇಶನ ಕೃಪೆಯಿಂದ ಸಂಕಷ್ಟ ನಿವಾರಣೆ ಆಗಲಿದೆ.

ನಮ್ಮ ವಕೀಲರ ಜತೆ ಚರ್ಚಿಸಿ ವಿವರ ಪಡೆಯುತ್ತೇನೆ.

ಚಿತ್ರದುರ್ಗದಲ್ಲಿ ಮಠದ ಮಾಜಿ ಆಡಳಿತಾಧಿಕಾರಿ SK ಬಸವರಾಜನ್ ಹೇಳಿಕೆ….

ಮುರುಘಾಶ್ರೀಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಅದೊಂದು ಕಾನೂನು ಪ್ರಕ್ರಿಯೆ ಆಗಿದೆ.

ಹೈಕೋರ್ಟ್ ಆದೇಶವನ್ನು ಮನ್ನಿಸಬೇಕಾಗುತ್ತದೆ.

ವಿಚಾರಣಾಧೀನ ಖೈದಿಗಳು ಜಾಮೀನು ಅರ್ಜಿ ಸಲ್ಲಿಸುವುದು ಸಹಜ.

ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆಯ ಆಶ್ರಯದಲ್ಲಿದ್ದಾರೆ.

ನಾವು ಸಾಕ್ಷಿ ಹೇಳುವ ಸಮಯ ಬಂದಾಗ ಸತ್ಯ ಹೇಳುತ್ತೇವೆ.

ಮುರುಘಾಶ್ರೀ ಮಠದ ಆಡಳಿತ, ಪೀಠಕ್ಕೆ ಕೂರುವ ಪ್ರಮೇಯವಿಲ್ಲ.

ಸದ್ಯ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿದೆ ಅಷ್ಟೇ.

ಹೈಕೋರ್ಟ್ ಸೂಚನೆ ಮೇರೆಗೆ ಜಿಲ್ಲಾ ನ್ಯಾಯಾಧೀಶರು ಮಠದ ಆಡಳಿತಾಧಿಕಾರಿ ಆಗಿದ್ದಾರೆ.


Spread the love