ಮುರುಘಾಮಠ ಜಾತ್ರಾ ಮಹೋತ್ಸವದಲ್ಲಿ ಸಂಚಾರಿ ಠಾಣೆ ಪೊಲೀಸರೇನು ಮಾಡುತ್ತಿದ್ದಾರೆ ಗೊತ್ತಾ…!

ಧಾರವಾಡ: ಸಾರ್ವಜನಿಕರಿಗೆ ಎಲ್ಲಿ ತಿಳುವಳಿಕೆ ನೀಡುವ ಅವಕಾಶ ಸಿಗುತ್ತದೆಯೋ ಅಲ್ಲೇಲ್ಲಾ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ತೆರಳಿ, ಅವಕಾಶವನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಧಾರವಾಡದ ಮುರುಘಾಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ರಸ್ತೆ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿದರು. ರಸ್ತೆಯಲ್ಲಿ ಸಂಚರಿಸುವಾಗ ಪ್ರತಿಯೊಬ್ಬರು ಜಾಗೃತಿಯಿಂದ ನಡೆದುಕೊಂಡರೇ, ಯಾವುದೇ ಅವಘಡಗಳು ಸಂಭವಿಸುವುದಿಲ್ಲವೆಂದು ಎಎಸ್ಐ ಎಂ.ಎಸ್.ಕರಗಣ್ಣನವರ ಜನರಿಗೆ ತಿಳುವಳಿಕೆ ನೀಡಿದರು.
ಗ್ರಾಮೀಣ ಪ್ರದೇಶದಿಂದ ಬರುವಾಗ ದ್ವಿಚಕ್ರ ವಾಹನ ತರುತ್ತೀರಿ. ಆಗ, ಹತ್ತೆ ನಿಮಿಷ ಕೆಲಸವಿದೆ ಎಂದುಕೊಂಡು ಬರುತ್ತೀರಿ. ಆದರೆ, ಬರುವಾಗ ಪ್ರಾಣವನ್ನ ಉಳಿಸುವ ಹೆಲ್ಮೇಟ್ ತರುವುದೇ ಇಲ್ಲ. ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ ಎಎಸ್ಐ ಕರಗಣ್ಣನವರ, ನಿಮ್ಮೇಲ್ಲರ ಸಹಕಾರದಿಂದ ಮಾತ್ರ ಅವಘಡಗಳನ್ನ ತಡೆಗಟ್ಟಬಹುದೆಂದು ಹೇಳಿದರು.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ನೂರಾರೂ ಜನರು ಪೊಲೀಸರ ಮಾತಿಗೆ, ತಲೆತೂಗಿದರು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಸಂಚಾರಿ ನಿಯಮಗಳನ್ನ ಪಾಲಿಸುವುದಾಗಿ ಭರವಸೆ ನೀಡಿದರು.
ಪೊಲೀಸರಾದ ಈರಣ್ಣ ಕವಳಿ, ಭೀಮನಗೌಡ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.