ಸೊಸೆ ಹತ್ಯೆಗೆ ಸ್ಕೇಚ್- ಬ್ಯಾಹಟ್ಟಿಯ ತಂದೆ-ಮಗನಿಗೆ “ಪೊಲೀಸ್ಗಿರಿ” ತೋರಿಸಿದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ…!!!
ಹುಬ್ಬಳ್ಳಿ: ಗರ್ಭೀಣಿ ಸೊಸೆಯನ್ನ ಹತ್ಯೆ ಮಾಡುವಂತೆ ಮಗನಿಗೆ ತಂದೆಯೋರ್ವ ಹೇಳಿಕೊಟ್ಟ ಆಡೀಯೋ ವೈರಲ್ ಆದ ಬೆನ್ನೆಲೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಅವರು ಇಬ್ಬರನ್ನು ಬಂಧಿಸಿ, ಪೊಲೀಸ್ ಪಾಠ ಮಾಡಿ ಕಳಿಸಿರುವ ಕುರಿತು ಮಾಹಿತಿ ಲಭಿಸಿದೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಾಬುಸಾಬ ಗುಡಿಸಲಮನಿ ತನ್ನ ಮಗ ಮಾಬುಸಾಬನಿಗೆ ಕಾಲ್ ಮಾಡಿ, ಸೊಸೆಯನ್ನ ಹತ್ಯೆಮಾಡಲು ಹೇಳಿದ ಆಡೀಯೋ ವೈರಲ್ ಆಗಿತ್ತು.
ಈ ವಿಷಯ ಗಮನಕ್ಕೆ ಬಂದ ತಕ್ಷಣವೇ ಇಬ್ಬರನ್ನೂ ಬಂಧಿಸಿದ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಅಷ್ಟೇ ಅಲ್ಲ, ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಅವರು ಖಡಕ್ ವಾರ್ನಿಂಗ್ ಕೂಡಾ ನೀಡಿದ್ದಾರೆಂದು ಗೊತ್ತಾಗಿದೆ.
