Karnataka Voice

Latest Kannada News

ಹುಬ್ಬಳ್ಳಿಯ ಶಿಕ್ಷಕಿಗೆ “ನೇಹಾ-ಅಂಜಲಿ” ಥರ ಹತ್ಯೆ ಮಾಡುವ ಬೆದರಿಕೆ ಪತ್ರ… Exclusive videos..

Spread the love

ಅಂಜಲಿ-ನೇಹಾಳಂತೆ ನಿನ್ನನ್ನು ಕೊಲೆ ಮಾಡ್ತೀವಿ;

ಶಿಕ್ಷಕಿಗೆ ಬೆದರಿಕೆ ಪತ್ರ

ಹುಬ್ಬಳ್ಳಿ: ನೇಹಾ ಹಾಗೂ ಅಂಜಲಿ ಕೊಲೆಯ ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗಿದ್ದವು. ಆದ್ರೆ, ಅದೆ ಅಂಜಲಿ, ನೇಹಾ ಹೆಸರನ್ನು ಹೇಳಿ ನಿಮ್ಮನ್ನು ಕೂಡಾ ಇದೆ ರೀತಿಯಾಗಿ ಕೊಲೆ ಮಾಡ್ತೀವಿ ಅಂತಾ ಪತ್ರದ ಮೂಲಕ ಶಿಕ್ಷಕಿಗೆ ಜೀವ ಬೆದರಿಕೆ ಪತ್ರ ಬರೆದು ಕಳಿಸಲಾಗಿದೆ.

ಪೂರ್ಣ ವೀಡಿಯೋ ನೋಡಿ…

ನಮಗೆ ಜೀವ ಬೆದರಿಕೆಯ ಪತ್ರ ಬಂದಿದೆ ನಮಗೆ ರಕ್ಷಣೆ ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿರುವ ಶಿಕ್ಷಕಿ ದೀಪಾ ಅಡವಿಮಠ ಅವರೇ ಆತಂಕದಲ್ಲಿದ್ದಾರೆ. ಕಳೆದ 30 ವರ್ಷದಿಂದ ಬೆಂಗೇರಿಯಲ್ಲಿನ ರೋಟರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ದೀಪಾ ಅವರ ಹೆಸರಿಗೆ ಬಂದ ಅನಾಮದೇಯ ಪತ್ರದಲ್ಲಿ ನಿನ್ನನ್ನು ಕೂಡಾ ಅಂಜಲಿ ಹಾಗೂ ನೇಹಾ ರೀತಿಯಲ್ಲಿ ಕೊಲೆ ಮಾಡ್ತೀವಿ ಅಂತಾ ಪತ್ರ ಬಂದಿದೆ ಅಂತಾರೇ ಶಿಕ್ಷಕಿ ದೀಪಾ.

ನನ್ನ ಹೆಂಡತಿ ಕಳೆದ 35 ವರ್ಷದಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಯಾರೊಬ್ಬರ ಜೊತೆ ವೈಷಮ್ಯ ಇಲ್ಲ. ಹೀಗಿದ್ರೂ ಕೂಡಾ ನಮಗೆ ಈ ರೀತಿಯಾದ ಬೆದರಿಕೆ ಪತ್ರ ಯಾರು ಬರೆದರು ಎಂಬುದೇ ಗೊತ್ತಾಗುತ್ತಿಲ್ಲ. ಈಗಾಗಲೇ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದ್ದು ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ನಡೆಸುವುದರ ಜೊತೆಗೆ ನಿಮ್ಮ ಜೊತೆ ನಾವಿದ್ದೀವಿ ಎಂದು ಧೈರ್ಯವನ್ನು ತುಂಬಿದ್ದಾರೆ ಅಂತಾ ದೀಪಾ ಪತ್ನಿ ಜಗದೀಶ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಿನಲ್ಲಿ ಅಂಜಲಿ ಹಾಗೂ ನೇಹಾ ಕೊಲೆಯ ನಂತರ ಮಹಿಳೆಯರಿಗೆ ಹೊರಗಡೆ ಓಡಾಡಲು ಭಯದ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ. ಶಿಕ್ಷಕಿಯನ್ನು ಕೂಡಾ ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಸಂಗತಿ ಆಘಾತಕಾರಿಯಾಗಿದ್ದು. ಈ ರೀತಿಯಾಗಿ ಬೆದರಿಕೆ ಹಾಕಿದ ಕಿಡಗೇಡಿಗಳನ್ನು ಕೇಶ್ವಾಪುರ ಪೊಲೀಸರು ಯಾವಾಗ ಬಂಧನ ಮಾಡಿ ಬಿಸಿ ಮುಟ್ಟಿಸುತ್ತಾರೆ ಎಂಬುದನ್ನು ಕಾದು ನೋಡುವಂತಾಗಿದೆ.


Spread the love

Leave a Reply

Your email address will not be published. Required fields are marked *