‘2’ ತಿಂಗಳಿಗೊಮ್ಮೆ ಮರ್ಡರ್ ಆಗೋದಾದ್ರೇ ಅದು ‘ಸಹಜಾ’ ಇದೆ: ಪೊಲೀಸ್ ಕಮೀಷನರ್ ರಮಣ ಗುಪ್ತಾ ಅಚ್ಚರಿ ಹೇಳಿಕೆ…

ಹುಬ್ಬಳ್ಳಿ: ಇಂಥಹ ದೊಡ್ಡ ಸಿಟಿಯಲ್ಲಿ ಎರಡು ತಿಂಗಳಿಗೊಮ್ಮೆ ಮರ್ಡರ್ ಆದರೆ, ಅದು ಸಹಜ ಇದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರು ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೋಷನಗರದಲ್ಲಿ ನಾಗರಾಜ ಚೆಲವಾದಿ ಎಂಬಾತನ ಹತ್ಯೆಯ ನಂತರ ಕಿಮ್ಸನ ಶವಾಗಾರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರು, ಇಂಥಹ ಹೇಳಿಕೆ ನೀಡಿದ್ದಾರೆ.
ಸಂಪೂರ್ಣ ಹೇಳಿಕೆ ಇಲ್ಲಿದೆ ನೋಡಿ…
ಹತ್ಯೆಗಳು ನಡೆದಾಗ ಅಂಥವರನ್ನ ಹಿಡಿದು ಕಾನೂನು ಕ್ರಮ ಜರುಗಿಸುವ ಬಗ್ಗೆ ಹೇಳಿಕೆ ನೀಡುವುದು ಸಹಜ. ಆದರೆ, ಕೊಲೆಗಳು ನಡೆದರೇ ಸಹಜ ಎನ್ನುವ ಹೇಳಿಕೆ ಪೊಲೀಸ್ ಕಮೀಷನರ್ ಬಾಯಿಂದ ಬಂದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.